ಬೆಂಗಳೂರು, ಸೆ.02 : ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ತಾಣಗಳ ಪಟ್ಟಿ ಬಿಡುಗಡೆ ಮಾಡಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಅತಿ ಹೆಚ್ಚು ಪ್ರವಾಸಿ ತಾಣಗಳು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ.
ಕುಪ್ಪಳ್ಳಿ, ಆಗುಂಬೆ , ಕವಲೇದುರ್ಗ ಕೋಟೆ, ಕುಂದಾದ್ರಿ ಗಿರಿ, ಚಿಪ್ಪಲಗುಡ್ಡೆ, ರಾಮೇಶ್ವರ ದೇವಸ್ತಾನ ತೀರ್ಥಹಳ್ಳಿ, ನವಿಲುಕಲ್ಲು ಗುಡ್ಡ, ಸಿದ್ದೇಶ್ವರ ಬೆಟ್ಟ, ಅಂಬುತೀರ್ಥ, ಅರುಣಗಿರಿ ದೇವಸ್ತಾನ, ಮೃಗವಧೆ ದೇವಸ್ತಾನ, ಅಚ್ಚಕನ್ಯಾ ಜಲಪಾತ, ತಲಾಸೆ ಅಬ್ಬೆ ಜಲಪಾತ, ಹಿಡ್ಲುಮನೆ ಜಲಪಾತ, ಕುಂಚಿಕಲ್ ಜಲಪಾತ ಬರ್ಕಣ ಜಲಪಾತ, ಜೋಗಿಗುಂಡಿ ಜಲಪಾತ, ಜೇನುಕಲ್ಲಮ್ಮ ದೇವಸ್ತಾನ ಕೋಡೂರು, ಹುಂಚ ಪದ್ಮಾವತಿ, ಕೊಡಚಾದ್ರಿ, ಸಾವೆಹಕ್ಲು, ನಗರ ಕೋಟೆ ಈ ಪಟ್ಟಿಯಲ್ಲಿದೆ.
ಇನ್ನು ಹಣಗೆರೆ ದೇವಸ್ತಾನ ಮತ್ತು ದರ್ಗಾ, ಮಂಡಗದ್ದೆ ಪಕ್ಷಿಧಾಮವನ್ನು ಶಿವಮೊಗ್ಗ ತಾಲ್ಲೂಕು ಎಂದು ಗುರುತಿಸಲಾಗಿದ್ದು ಸರಿಪಡಿಸುವ ವಾಗ್ಧಾನ ದೊರೆತಿದೆ.ಇನ್ನೂ ಹತ್ತಾರು ಸ್ಥಳಗಳನ್ನು ಗುರುತಿಸಿ ಸಂರಕ್ಷಿಸಿ ಪ್ರವಾಸೋದ್ಯಮಕ್ಕೆ ಸಜ್ಜುಗೊಳಿಸುವ ಅವಕಾಶವಿದೆ.