ಶಿವಮೊಗ್ಗ, ಮೇ.07: ದುಃಖದಲ್ಲಿಯೂ ಮಾನವೀಯತೆ ಮೆರೆದವರಿಗೆ ಶಂಕರ ಕಣ್ಣಿನ ಆಸ್ಪತ್ರೆ ಅಭಿನಂದನೆ ಸಲ್ಲಿಸಿದೆ.
ಮೇ 6 ರುಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಜೆ ಎಚ್ ಪಟೇಲ್ ಬಡಾವಣೆಯ ಬಸವರಾಜಪ್ಪ (72) ಹಠಾತ್ತಾಗಿ ನಿಧನ ಹೊಂದಿದ್ದರು. ಈ ವೇಳೆ ಅವರ ಕುಟುಂಬದವರು ಸ್ವಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗಿ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ನಿಧಿಗೆ ಮೃತರ ಎರಡೂ ಕಣ್ಣುಗಳನ್ನು ದಾನ ಮಾಡಿ ಇಬ್ಬರು ದೃಷ್ಟಿಹೀನರ ಬಾಳಿಗೆ ಬೆಳಕಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ನೇತ್ರದಾನ ಮಾಡುವವರು ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರನಿಧಿ ದೂರವಾಣಿ ಸಂಖ್ಯೆ 96111-67158 ಕ್ಕೆ ಸಂಪರ್ಕಿಸಬಹುದಾಗಿದೆ.