ಸಾಗರ , ಜು. 16 : ಸಿಗಂದೂರು ಚೌಡೇಶ್ವರಿ ದರ್ಶನದ ಸಮಯ ಸಂಜೆಯ ನಂತರ ತಾಲೂಕಿನ ಸಂಪರ್ಕ ಕಳೆದುಕೊಳ್ಳುತ್ತಿದ್ದ ಕರೂರು ಬಾರಂಗಿ ಭಾಗದ ಜನರಿಗೆ ಸಿಗಂದೂರು ಸೇತುವೆ ಜೀವನಾಡಿಯಾಗಿದೆ.
ಈ ಸಂಪರ್ಕ ಸೇತುವೆಯಿಂದ ದೇವಸ್ಥಾನದ ದರ್ಶನದ ಅವಧಿಯನ್ನೂ ವಿಸ್ತರಿಸಲಾಗಿದೆ. ಲಾಂಜ್ ಸೇವೆಯಿದ್ದಾಗ ಸಂಜೆ 7 ಗಂಟೆಗೆ ದೇವರ ಪೂಜೆಯೊಂದಿಗೆ ದೇವಸ್ಥಾನದ ಬಾಗಿಲು ಹಾಕಲಾಗುತ್ತಿತ್ತು.
ಈಗ ಎರಡು ಗಂಟೆಯ ಅವಧಿ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯ ವರೆಗೆ ದೇವಿಯ ದರ್ಶನ ಮುಂದುವರೆಯಲಿದೆ. ಈ ಕುರಿತು ಧರ್ಮದರ್ಶಿ ರಾಮಪ್ಪನವರ ಪುತ್ರ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.