ಭದ್ರಾವತಿ ,ಆ.23 : ಪತಿಯನ್ನು ಕೊಲೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೋರ್ವನಿಗೆ ಏಳುವರ್ಷ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಿ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶ ರಾದ ಇಂದಿರಾ ಮೈಲಸ್ವಾಮಿ ಚೆಟ್ಟೆಯರ್ ಶನಿವಾರ ತೀರ್ಪು ನೀಡಿದರು.
ಅಂತರಗಂಗೆಯಲ್ಲಿ ಶಾಲಾಶಿಕ್ಷಕಿಯಾಗಿದ್ದ ಲಕ್ಷ್ಮೀಯನ್ನು ಸೊರಬದ ಇಮ್ತಿಯಾಜ್ ಎಂಬ ಶಿಕ್ಷಕ ಗುಲ್ಬರ್ಗದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ, ಆಕೆಯನ್ನು ರಿಜಿಸ್ಟರ್ ಮ್ಯಾರಿಯೆಜ್ ಆಗಿದ್ದ ಇವರದಾಂಪತ್ಯದ ಫಲವಾಗಿ ಇವರಿಗೆ ಒಂದು ಗಂಡು ಮಗು ಜನಿಸಿತು. ನಂತರ ಇಮ್ತಿಯಾಜ್ ಸೊರಬದ ತೆಲಗುಂದ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ, ಭದ್ರಾವತಿಯ ಅಂತರಗಂಗೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಆಕೆ ಭದ್ರಾವತಿಯ ಜನ್ನಾಪುರದ ಎನ್‌ಟಿಬಿ ಕಚೇರಿ ಸಮೀಪದಲ್ಲಿ ಬಾಡಿಗೆಮನೆಯಲ್ಲಿ ವಾಸಮಾಡುತ್ತಿದ್ದಳು ಆಕೆಯ ಪತಿಇಮ್ತಿಯಾಜ್ ಆಗಾಗ ಸೊರಬದಿಂದ ಇಲ್ಲಿಗೆ ಬಂದುಹೋಗುತ್ತಿದ್ದ.
ಲಕ್ಷ್ಮೀಮನೆಯ ಪಕ್ಕದಲ್ಲಿಯೆ ಲಕ್ಷ್ಮೀಯ ಬಾಲ್ಯದಗೆಳೆಯ ಕೃಷ್ಣಮೂರ್ತಿ ಎಂಬಾತನು ಮನೆಮಾಡಿಕೊಂಡಿದ್ದನು ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ನಡುವೆ ಹೆಚ್ಚಿನ ಒಡನಾಟ ಕಂಡುಬಂದ ಕಾರಣ ಇಮ್ತಿಯಾಜ್ ತನ್ನ ಪತ್ನಿಗೆ ಇದು ಸರಿಯಲ್ಲ ಎಂದು ಬುದಿಹೇಳುತ್ತಿದ್ದನು. ಈ ವಿಷಯ ಇಮ್ತಿಯಜ್ ಮನೆಯವರಿಗೂ ಸಹ ತಿಳಿದು ಆವರುಗಳೂ ಸಹ ಲಕ್ಷ್ಮೀಗೆ ಬುದ್ದಿವಾದ ಹೇಳಿದ್ದರು.
2016 ನೇ ವರ್ಷದ ಜುಲೈ ತಿಂಗಳಲ್ಲಿ ಇಮ್ತಿಯಾಜ್ ಪತ್ನಿ ಲಕ್ಷ್ಮೀಯನ್ನು ರಂಜಾನ್ ಹಬ್ಬಕ್ಕೆ ಕರೆತರುವುದಾಗಿ ಸೊರಬದ ತನ್ನ ಮನೆಯಲ್ಲಿ ತಿಳಿಸಿ ಭದ್ರಾವತಿಯ ಜನ್ನಪುರದಲ್ಲಿದ್ದ ತನ್ನ ಪತ್ನಿ ಲಕ್ಷ್ಮೀ ಮನೆಗೆ ಬಂದಿದ್ದ. ಆಗ ಆಕೆ ಕ್ರಷ್ಣಮೂರ್ತಿ ಯೊಂದಿಗೆ ಸಲುಗೆಯಿಂದಿರುವುದು ನೋಡಿ ಆಕೆಯೊಂದಿಗೆ ಜಗಳವಾಡಿದ್ದಾನೆ.ನಂತರ 2016 ರ ಜುಲೈ 7 ರಂದು ರಾತ್ರಿ 7-30 ರ ಸಮಯದಲ್ಲಿ ಈ ಕುರಿತಂತೆ ಲಕ್ಷ್ಮೀಗೂ ಇಮ್ತಿಯಾಜ್‌ಗೂ ಜಗಳವಾಗಿದೆ.ಆಗ ಲಕ್ಷ್ಮೀ ತನ್ನ ಸ್ನೇಹಿತ ಕೃಷ್ಣಮೂರ್ತಿ ಜೊತೆ ಸೇರಿ ಇಮ್ತಿಯಾಜನನ್ನು ರಾಡಿನಿಂದ ಹೊಡೆದು ಕೊಲೆಮಾಡಿದ್ದಾಳೆ. ನಂತರ ಮತ್ತೋರ್ವ ಶಿವರಾಜ್ ಎಂಬಾತನ ನೆರವನ್ನು ಪಡೆದುಕೊಂಡು ಮೂವರೂ ಸೇರಿ ಇಮ್ತಿಯಾಜ್ ಮೃತಶರೀರವನ್ನು ಭದ್ರಾ ನದಿಗೆ ಎಸೆದರು ಬಂದಿದ್ದರು.
ಕೊಲೆಯಾದ ಮಾರನೆ ದಿನ ಲಕ್ಷ್ಮೀ ಇಮ್ತಿಯಾಜ್ ಸಹೋದರನಿಗೆ ಫೋನ್ ಮಾಡಿ ಕೂಡಲೆ ಬರುವಂತೆ ಹೇಳಿದ್ದಾಳೆ ಇಮ್ತಿಯಾಜ್ ಸಹೋದರ ಭದ್ರಾವತಿಯ ಲಕ್ಷ್ಮೀ ಮನೆಗೆ ಬಂದಾಗ ಆಕೆ ಅಳುತ್ತಾ ರಾತ್ರಿ ನನಗೂ ನಿಮ್ಮಣ್ಣ ಇಮ್ತಿಯಾಜ್‌ಗೂ ಜಗಳವಾಯಿತು.ಆ ಸಿಟ್ಟಿನ ಬರದಲ್ಲಿ ನಾನು ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದೆ ಅದರಿಂದ ಅವನು ಸತ್ತುಹೋದ ಆಗ ನಾನು ಪಕ್ಕದ ಮನೆಯ ಕೃಷ್ಣಮೂರ್ತಿ ಹಾಗೂ ಶಿವರಾಜ್ ಅವರ ಬಳಿ ಸಹಾಯ ಕೇಳಿ ಅವರ ಸಹಾಯದಿಂದ ಇಮ್ತಿಯಾಜ್ ದೇಹವನ್ನು ಭದ್ರಾ ನಾಲೆಗೆ ಹಾಕಿಬಂದೆ ಈಗ ನೀನೆ ನಮ್ಮನ್ನು ಕಾಪಾಡಬೇಕು ಎಂದು ಕೇಳಿಕೊಂಡಿದ್ದಾಳೆ.
ಇಮ್ತಿಯಾಜ್ ಸಹೋದರ ತನ್ನ ಮನೆಯವರಿಗೆ ಸಂಬಂಧಿಕರೊಂದಿಗೆ ಈ ವಿಷಯ ಚರ್ಚಿಸಿ ಲಕ್ಷ್ಮೀ ಉದ್ಧೇಶ ಪೂರ್ವಕವಾಗಿ ತನ್ನ ಪ್ರಿಯಕರ ಕೃಷ್ಣಮೂರ್ತಿ ಮತ್ತು ಶಿವರಾಜ್ ಎಂಬುವವರೊಂದಿಗೆ ಸೇರಿಕೊಂಡು ನನ್ನ ಅಣ್ಣನನ್ನು ಕೊಲೆಮಾಡಿ ಭದ್ರಾ ನಾಲೆಗೆ ಎಸಿದಿದ್ದಾಳೆ ಎಂದು ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ಲಕ್ಷ್ಮೀ,ಕೃಷ್ಣಮೂರ್ತಿ,ಶಿವರಾಜ್ ಮೇಲೆ ದೂರು ಸಲ್ಲಿಸದ ನಂತರ ಪೋಲಿಸರು ಲಕ್ಷ್ಮೀ, ಕೃಷ್ಣಮೂರ್ತಿ ಮತ್ತು ಶಿವರಾಜ್ ಈ ಮೂವರು ಆರೋಪಿಗಳನ್ನು ಬಂಧಿಸಿ ಆರೋಪಿಗಳ ವಿರುದ್ಧ ಐಪಿಸಿ ಕಲಂ 302 , 120 (ಬಿ) 201 ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷ್ಯವಿಚಾರಣೆ ನಡೆಸಿ, ಉಭಯ ಪಕ್ಷಗಾರರ ಪರ ವಾದ-ಪ್ರತಿವಾದ ಆಲಿಸಿದ ನಂತರ ಆರೋಪಿಗಳ ಮೇಲಿನ ಆರೋಪ ಸಾಬೀತಾದ ಕಾರಣ ನೇ ಆರೋಪಿ ಲಕ್ಷ್ಮೀ ಹಾಗೂ 2 ನೇ ಆರೋಪಿ ಕೃಷ್ಣಮೂರ್ತಿಗೆ ಕೊಲೆ ಆರೋಪಕ್ಕೆ ಮರಣ ದಂಡನೆ ಶಿಕ್ಷೆಯನ್ನು ಹಾಗೂ ೩ನೇ ಆರೋಪಿ ಶಿವರಾಜ್‌ಗೆ ಕೊಲೆ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪಕ್ಕೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟೆಯರ್ ಶನಿವಾರ ತೀರ್ಪು ನೀಡಿದರು.1 ಮತ್ತು 2 ನೇ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಜೊತೆಗೆ ಮತ್ತು 13 ಲಕ್ಷ ದಂಡವನ್ನ ವಿಽಸಿದ್ದು ಇದರಲ್ಲಿ 10 ಲಕ್ಷ ಹಣವನ್ನ ಮೃತನ ತಾಯಿಗೆ ಪರಿಹಾರವಾಗಿ ನೀಡಬೇಕು ಉಳಿದ 3 ಲಕ್ಷ ಹಣವನ್ನ ದಂಡವಾಗಿ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ತಾಲೂಕು ಮಟ್ಟದ ನ್ಯಾಯಾಲಯದಲ್ಲಿ ಮರಣ ದಂಡನೆಯಂತಹ ಗೋರ ಶಿಕ್ಷೆ ಹೊರಬಿದ್ದಿರುವುದು ಇದೇ ಮೊದಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ.ಪಿ ವಾದಿಸಿದ್ದರು.