ನಿಂತಿದ್ದ ಬಸ್ ಗೆ ಕಾರು ಡಿಕ್ಕಿ; ಶಾಹಿ ಗಾರ್ಮೆಂಟ್ಸ್ ನ ಅಧಿಕಾರಿ ಸಾವು

Kranti Deepa

ಶಿವಮೊಗ್ಗ:ನಗರದ ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಎದುರು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದು ಪ್ರತಿಷ್ಠಿತ ಗಾರ್ಮೆಂಟ್ಸ್ ನ ಸೀನಿಯರ್ ಕ್ಯಾಲಿಟಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ.

ಮೃತರನ್ನು ವಿಜಯ ಕುರ್ಲಿ ಎಂದು ಗುರುತಿಸಲಾಗಿದೆ. ವಿನೋಬ ನಗರದಲ್ಲಿರುವ ಸ್ನೇಹಿತನನ್ನು ಮನೆಗೆ ಬಿಟ್ಟು ವಾಪಾಸ್ ಶಾಹೀ ಗಾರ್ಮೆಂಟ್ಸ್ ಗೆ ಹೋಗುವಾಗ ಮಧ್ಯ ರಾತ್ರಿ ಈ ದುರ್ಘಟನೆ ಸಂಭವಿಸಿದೆ.

ವಿಜಯ ಕುರ್ಲಿ ಶಾಹೀ ಗಾರ್ಮೆಂಟ್ಸ್ ನಲ್ಲಿ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ಆಗಿದ್ದರು. 48 ರ ಇವರು ಸ್ಯಾಂಟ್ರೋ ಕಾರಿನಲ್ಲಿ ತೆರಳುವಾಗ ಬಾರ್ಗವಿ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ.

ಆಲ್ಕೊಳ ಸರ್ಕಲ್, ಎಪಿಎಂಸಿ ರಸ್ತೆ, ಬಸ್ ನಿಲ್ದಾಣದ ಮೂಲಕ ಮಲಗೊಪ್ಪದ ಶಾಹೀ ಗಾರ್ಮೆಂಟ್ಸ್ ಗೆ ವಿಜಯ ಕುರ್ಲಿ ತೆರಳಬೇಕಿತ್ತು. ಕಾರನ್ನ ಚಲಾಯಿಸುತ್ತಿದ್ದ ಚಾಲಕ ಕಾರನ್ನ ನಿಂತ ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ.

ವಿಜಯ ಕುರ್ಲಿಯವರನ್ನು ತಕ್ಷಣ ಮೆಗ್ಗಾನ್ ಸಾಗಿಸಲಾದರೂ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ. ವಿಜಯ ಕುರ್ಲಿ ಮೂಲತ ಧಾರವಾಡ ಜಿಲ್ಲೆಯವರಾಗಿದ್ದರು. ಪ್ರಕರಣ ಪಶ್ಚಿಮ ಸಂಚಾರಿ ರಸ್ತೆಯಲ್ಲಿ ಸಂಭವಿಸಿದೆ.

Share This Article
";