ರಿಪ್ಪನ್‌ಪೇಟೆ , ಆ.20 : ಇಲ್ಲಿಗೆ ಸಮೀಪದ ನವಟೂರು ಗ್ರಾಮದ ನವತೂರು ಎಂಬಲ್ಲಿ ಆನಂದ್ (30 ) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.ಇದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೋ ಎಂಬ ಶಂಕೆ ಇದ್ದು, ತನಿಖೆಯಿಂದ ತಿಳಿಯಬೇಕಾಗಿದೆ.
ಯುವಕನ ಮನೆ ಸಮೀಪ ಬಾವಿ ಇದ್ದು ಆ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ನೆಮಟೂರು ಗ್ರಾಮದ ಭರಮಪ್ಪ ಎಂಬುವವರ ಪುತ್ರ ಆನಂದ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಯಲ್ಲಿ ಇಲ್ಲದ ಕಾರಣ ಆ ಹುಡುಗನನ್ನು ಮನೆಯವರು ಹುಡುಕಿದ್ದಾರೆ , ಕೊನೆಯದಾಗಿ ಬಾವಿಯನ್ನು ಎಣಿಕೆ ದಾಗ ಆ ಹುಡುಗ ಶವವಾಗಿ ಪತ್ತೆಯಾಗಿದ್ದಾನೆ.ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.