ಸಿಟಿ ಬಸ್‌ನಿಂದ ಬಿದ್ದು ವಿದಾರ್ಥಿ ಸಾವು

Kranti Deepa

ಶಿವಮೊಗ್ಗ,ಫೆ.11 : ನಗರದ ಮೈಲಾರೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಖಾಸಗಿ ನಗರ ಸಾರಿಗೆ ಬಸ್‌ನಿಂದ ಬಿದ್ದು ಕಾಲೇಜಿನ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗುರುಪುರದಿಂದ ಎಟಿಎನ್‌ಸಿಸಿ ಕಾಲೇಜಿಗೆ ಖಾಸಗಿ ಬಸ್‌ನಲ್ಲಿ ಹೊರಟಿದ್ದ ವಿದ್ಯಾರ್ಥಿ ಯಶವಂತ್ (18 ) ಶಿವಮೊಗ್ಗದ ಮೇಲಾರೇಶ್ವರ ದೇವಸ್ಥಾನದ ಬಳಿ ಏಕಾಏಕಿ ಚಾಲಕ ಬ್ರೇಕ್ ಹಾಕಿದಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿ ಫುಟ್ ಬೋರ್ಡ್ ನ ಮೇಲೆ ನಿಂತಿದ್ದಾಗಿ ಗೊತ್ತಾಗಿದೆ.ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಇಂದು ಬೆಳಿಗ್ಗೆ ಸಂಭವಿಸಿದೆ.

Share This Article
";