ಶಿವಮೊಗ್ಗ, ಏ.08 : ಪೋಷಕರೊಬ್ಬರು ತಮ್ಮ ಮೃತ ಮಗನ ಕಣ್ಣುಗಳನ್ನು ಇನ್ನೊಬ್ಬರ ಬಾಳಿಗೆ ಬದುಕಾಗಲೆಂದು ದಾನ ಮಾಡಿದ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಕೋಟೆತಾರಿಗದ ಮೋಹನ್ ಹಾಗೂ ಸುನಿತಾ ದಂಪತಿ ದುಃಖದ ನಡುವೆಯೂ ಇಂತಹದ್ದೊಂದು ನಿರ್ಣಯ ಕೈಗೊಂಡು ತಮ್ಮ ಮಗನ ಕಣ್ಣುಗಳು ಇನ್ನೊಬ್ಬರ ಬದುಕ ಬೆಳಕ ನೋಡುವುದಕ್ಕಾಗಿ ನೀಡಿದ್ದಾರೆ.
ಈ ದಂಪತಿಗೆ ಶಮಿತ್ (18 ) ಎಂಬ ಮಗನಿದ್ದ. ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಮಿತ್ ಸೋಮವಾರ ಸಾವನ್ನಪ್ಪಿದ್ದನು.
ಈ ಹಿನ್ನೆಲೆಯಲ್ಲಿ ಆತ ಕಣ್ಣುಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಗೆ ಪೋಷಕರು ದಾನ ಮಾಡಿದ್ದಾರೆ.