ಶಿವಮೊಗ್ಗ, ಫೆ. 21 : ನಗರದ ತುಂಗಾ ನದಿಯ ಹಿನ್ನೀರಿನಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದೆ. ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು ಸ್ಥಳಕ್ಕೆ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.
ಇಲ್ಲಿನ ಸಕ್ರೆಬೈಲ್ ಆನೆ ಬಿಡಾರದ ಸಮೀಪ ೧೦ ನೇ ಮೈಲಿಕಲ್ಲಿನ ಬಳಿಯಲ್ಲಿ, ಅರಣ್ಯ ಪ್ರದೇಶದಿಂದ ಒಳಕ್ಕೆ ತೆರಳಿದಾಗ ಸಿಗುವ ತುಂಗಾ ಬ್ಯಾಕ್ ವಾಟರ್ ದಡದಲ್ಲಿ ಮೂವರು ಮೃತದೇಹ ಪತ್ತೆಯಾಗಿದೆ ಮೇಲ್ನೋಟಕ್ಕೆ ಮೃತದೇಹಗಳು ಕೊಳೆತು ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರು ಪುರುಷರು ಹಾಗೂ ಮೃತ ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಸಿಗಬೇಕಿದೆ.