ರಾಜ್ಯದಲ್ಲಿ 10 ಸಾವಿರ ಮನೆಗಳ ನಿರ್ಮಾಣದ ಗುರಿ

Kranti Deepa
ಬೆಂಗಳೂರು,ಜು.19 : ರಾಜ್ಯ ಗೃಹ ಮಂಡಳಿಯಿಂದ ರಾಜ್ಯಾದ್ಯಂತ 10,000 ಮನೆಗಳನ್ನು ನಿರ್ಮಿಸಿ, ಸೂರು ಇಲ್ಲದವರಿಗೆ ನೀಡುವಂತಹ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೆಹೆಚ್‌ಬಿ ಆಯುಕ್ತ ಕೆ.ಎ. ದಯಾನಂದ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರಸ್ ಟ್ರಸ್ಟ್  ಆಯೋಜಿಸಿದ್ದ  ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿ+ತ್ರೀ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡುವ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ನಮ್ಮ ಗೃಹ ಮಂಡಳಿಗೆ ಸೇರಿದ ಸಾಕಷ್ಟು ನಿವೇಶನಗಳು ಇವೆ ಅವೆಲ್ಲವನ್ನ ಕ್ರೂಢೀಕರಿಸುವಂತಹ ಕೆಲಸ ಆರಂಭಗೊಂಡಿದ್ದು, ಶೇಕಡ ೭೫ ರಷ್ಟು ಪೂರ್ಣಗೊಂಡಿದೆ ಇವುಗಳನ್ನ ಹರಾಜು ಮಾಡುವ ಅಥವಾ ಹಂಚಿಕೆ ಮಾಡುವ ಬಗ್ಗೆಯೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಆಸ್ತಿಗೆ ಸಂಬಂಸಿದಂತೆ ಈ ಸ್ವತ್ತು ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನನ್ನ ವೃತ್ತಿಯಲ್ಲಿ ಮಹತ್ತರ ಬೆಳವಣಿಗೆ ಎಂದು ಭಾವಿಸುತ್ತೇನೆ ಇದಕ್ಕೆ ಸರ್ಕಾರದಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಯಿತು ಇದರ ಪರಿಣಾಮ ಇಂದು ರಾಜ್ಯಾದ್ಯಂತ ಇ -ಖಾತ ವ್ಯವಸ್ಥೆ ಜಾರಿ ಗೊಳ್ಳುತ್ತಿದೆ, ನೆರೆಯ ರಾಜ್ಯಗಳು ಕೂಡ ನಮ್ಮ ವ್ಯವಸ್ಥೆಯನ್ನು ನೋಡಿಕೊಂಡು ಆಯಾ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾಕಾರಿಯಾಗಿದ್ದ ಸಂದರ್ಭದಲ್ಲಿ ಶರಾವತಿ ಹಿನ್ನಿರಿನ ಜನರ ಸಮಸ್ಯೆಗೆ ಪರಿಹಾರವನ್ನ ಕಂಡುಹಿಡಿಯುವ ನಿಟ್ಟಿನಲ್ಲಿ ಮುಂದಾಗಿದ್ದೆ ಆ ನಿಟ್ಟಿನಲ್ಲಿ ಕಾರ್ಯೊನ್ಮುಖನಾಗಿದ್ದೆ. ಸಾಕಷ್ಟು ಕೆಲಸ ಮುಗಿದ ಸಂದರ್ಭದಲ್ಲಿಯೇ ಇಲ್ಲಿಂದ ವರ್ಗಾವಣೆ ಗೊಂಡ ಹಾಗಾಗಿ ಆ ಕೆಲಸ ಅಲ್ಲಿಗೆ ಅಪೂರ್ಣಗೊಂಡಿತು ಎಂದು ಅವರು, ಶಿವಮೊಗ್ಗದೊಂದಿಗೆ ಅದರಲ್ಲೂ ವಿಶೇಷವಾಗಿ ಪತ್ರಕರ್ತ ರೊಂದಿಗಿನ ಪ್ರೀತಿ ವಿಶ್ವಾಸ ಈಗಲೂ ಸಹ ಮುಂದುವರೆದಿದೆ ಸಹಜವಾಗಿ ಅಕಾರಿಗಳು ಮತ್ತು ಪತ್ರಕರ್ತರ ನಡುವೆ ಸ್ನೇಹವಿರುತ್ತದೆ ಆದರೆ ಉತ್ತಮ ಸಂಬಂಧವಿರುವುದಿಲ್ಲ ನಾನು ಈ ವಿಷಯದಲ್ಲಿ ಶಿವಮೊಗ್ಗದ ಪತ್ರಕರ್ತರೊಂದಿಗೆ ಉತ್ತಮ ಸಂಬಂಧ ಸ್ನೇಹ, ಪ್ರೀತಿ ಎಲ್ಲವನ್ನೂ ಹೊಂದಿದ್ದೇನೆ ಎಂದು ಹೇಳಿದರು.
ಅಕಾರಿಗಳು ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಾವಾಲೋಕನಾ ಮಾಡಿಕೊಳ್ಳುವ ಅಗತ್ಯವಿದೆ ಎಂದ ಅವರು, ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಪ್ರಸ್ತುತ ದಿನಮಾನಗಳಲ್ಲಿ ಕಾನೂನುಬಾಹಿರ. ಲೇಔಟ್‌ಗಳು ಹೆಚ್ಚಾಗುತ್ತಿದ್ದು ಇದನ್ನ ತಡೆಯುವ ಸಲುವಾಗಿಯೇ ಇ-ಸ್ವತ್ತು ಯೋಜನೆಯನ್ನ ಜಾರಿಗೆ ತರಲಾಯಿತು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ, ಪತ್ರಕರ್ತರಾದ ರಾಮಚಂದ್ರ ಗುಣಾರಿ, ಸಂತೋಷ್ ಕಾಚಿನಕಟ್ಟೆ, ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿಯೂ ಸಹ ಕೆಹೆಚ್‌ಬಿ ವತಿಯಿಂದ ಲೇಔಟ್ ಮಾಡಲು ಚಿಂತನೆ ನಡೆಸಲಾಗಿದ್ದು ಭೂ ಮಾಲೀಕರು ಶೇ. 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆಗೆ ಮುಂದೆ ಬಂದಿದ್ದಾರೆ ಇದನ್ನು ಕೂಡ ಕಾರ್ಯರೂಪಕ್ಕೆ ತರಲಾಗುವುದು.

Share This Article
";