ಶಿವಮೊಗ್ಗ, ಸೆ.10 : ಆಟೋ ಮತ್ತು ದ್ವಿಚಕ್ರವಾಹನದ ನಡುವೆ ಡಿಕ್ಕಿ ಉಂಟಾಗಿ ದ್ವಿಚಕ್ರವಾಹನ ಸವಾರ ಅರ್ಚಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ರಾತ್ರಿ ಕಮಲಾ ನರ್ಸಿಂಗ್ ಹೋಂ ಬಳಿ ಸಂಭವಿಸಿದೆ.ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅರ್ಚಕನಿಗೆ ಎಂಬುವರಿಗೆ ಆಟೋವೊಂದು ಡಿಕ್ಕಿ ಹೊಡೆದಿದೆ. ಇದರಿಂದ ಪಜ್ಞಾಹೀನ ಸ್ಥಿತಿಗೆ ಹೋದ ಅವರನ್ನು ಆಟೋದವರರೇ ಮೆಗ್ಗಾನ್ ಗೆ ಕರೆದೊಯ್ದಿದ್ದಾರೆ.
ಅಪಘಾತದಿಂದ ಭಯಗೊಂಡ ಆಟೋ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದರು. ಆಸ್ಪತ್ರೆಯ ಸಿಬ್ಬಂದಿಗಳು ಗಾಯಾಳುವನ್ನು ಉಪಚರಿಸಿ ಅವರ ಜೇಬಿನಲ್ಲಿದ್ದ ರಾಯರ ಮಠದಲ್ಲಿ ಪಂಚಾಮೃತ ಮಾಡಿಸಿದ ಚೀಟಿಯಿಂದ ಪರಿಚಿತರೊಬ್ಬರ ಮೂಲಕ ಪತ್ತೆ ಮಾಡಿದ್ದಾರೆ.ಈ ವೇಳೆ ಆಟೋ ಚಾಲಕ ತಮ್ಮ ಸ್ನೇಹಿತರೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿದ್ದಾರೆ.ಗಾಯಾಳು ರಾಘವೇಂದ್ರ ಮಠದಲ್ಲಿ ಅರ್ಚಕ ಎಂದು ಗೊತ್ತಾಗಿದೆ.
ಇದಕ್ಕೂ ಮುನ್ನ ಮೊದಲು ಪೋಸ್ಟ್ ಆಫೀಸ್ ನಲ್ಲಿ ಸೇವೆ ಮಾಡಿಕೊಂಡು ನಿವೃತ್ತಿ ಪಡೆದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ನಂತರ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.