ಶಿವಮೊಗ್ಗ, ಡಿ.11 : ಕಿಡ್ನಿ ಎಂಬುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು ಜೋಪಾನ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕಿವಿ ಮಾತು ಹೇಳಿದರು.ದುರ್ಗಿಗುಡಿ ತೃಪ್ತಿ ಹೆಲ್ತ್ ಕೇರ್ ನಲ್ಲಿ ಗುರುವಾರ ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವು ಪ್ರತಿದಿನ ಹಲವಾರು ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ. ಆದರೆ, ಕೆಲವು ಕಾರ್ಯಕ್ರಮಗಳು ಮಾತ್ರ ನಮ್ಮ ಮನಸ್ಸು, ಹೃದಯ, ಆತ್ಮಕ್ಕೆ ತಾಕುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪೊಲೀಸರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು.
ಕಿಡ್ನಿ ಮತ್ತು ಮೂತ್ರಕೋಶದ ಬಗ್ಗೆ ಬಹಳಷ್ಟು ಜನರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ, ಪೊಲೀಸರು ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಿಬಿರ ಯಸಸ್ವಿಯಾಗಲಿ ಎಂದು ಆಶಿಸಿದರು.ಈ ವೇಳೆ ನೂರಾರು ಜನ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಶಿಬಿರದ ಲಾಭ ಪಡೆದರು.
ಈ ಸಂದರ್ಭದಲ್ಲಿ ಡಿಎಆರ್ ಆರ್.ಪಿ.ಐ. ಇನ್ಸ್ ಪೆಕ್ಟರ್ ಸೋಮಶೇಖರ್, ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ಧನಗೌಡ, ತಜ್ಞ ವೈದ್ಯರಾದ ಡಾ. ಚಂದ್ರಶೇಖರ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶಿವಮೊಗ್ಗ: ಕಿಡ್ನಿ ಎಂಬುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು ಜೋಪಾನ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕಿವಿ ಮಾತು ಹೇಳಿದರು.
ದುರ್ಗಿಗುಡಿ ತೃಪ್ತಿ ಹೆಲ್ತ್ ಕೇರ್ ನಲ್ಲಿ ಗುರುವಾರ ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾವು ಪ್ರತಿದಿನ ಹಲವಾರು ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ. ಆದರೆ, ಕೆಲವು ಕಾರ್ಯಕ್ರಮಗಳು ಮಾತ್ರ ನಮ್ಮ ಮನಸ್ಸು, ಹೃದಯ, ಆತ್ಮಕ್ಕೆ ತಾಕುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪೊಲೀಸರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು.
ಕಿಡ್ನಿ ಮತ್ತು ಮೂತ್ರಕೋಶದ ಬಗ್ಗೆ ಬಹಳಷ್ಟು ಜನರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ, ಪೊಲೀಸರು ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಿಬಿರ ಯಸಸ್ವಿಯಾಗಲಿ ಎಂದು ಆಶಿಸಿದರು.
ಈ ವೇಳೆ ನೂರಾರು ಜನ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಶಿಬಿರದ ಲಾಭ ಪಡೆದರು.
ಈ ಸಂದರ್ಭದಲ್ಲಿ ಡಿಎಆರ್ ಆರ್.ಪಿ.ಐ. ಇನ್ಸ್ ಪೆಕ್ಟರ್ ಸೋಮಶೇಖರ್, ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ಧನಗೌಡ, ತಜ್ಞ ವೈದ್ಯರಾದ ಡಾ. ಚಂದ್ರಶೇಖರ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
