ಸಾಗರ, ಅ.23 : ಇಲ್ಲಿನ ನೆಹರು ನಗರದ ನಿವಾಸಿ,ಗಜಾನನ ಸಾರಿಗೆ ಸಂಸ್ಥೆಯ ನಿವೃತ್ತ ಉದ್ಯೋಗಿ ಕೋಟಿ ಶೆಟ್ಟಿ (73), ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೋಟಿ ಶೆಟ್ಟಿ ಅವರು ಡೆತ್ ನೋಟ್ ಬರೆದು ಕೊಂಡಿದ್ದು ಅದರಲ್ಲಿ ನನ್ನ ಎರಡು ಕಣ್ಣುಗಳು ಸರಿಯಾಗಿ ಕಾಣದೆ ಇರುವುವರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ಸಮಸ್ಯೆ ಮಾಡಬೇಡಿ ಎಂದು ಬರೆದುಕೊಂಡಿರುವ ಚೀಟಿ ಅವರ ಬಳಿ ದೊರಕಿದೆ.