ಶಿವಮೊಗ್ಗ,ಅ.17 : ಅಕರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದ ಬೆಳಗಾವಿಯ 86 ವರ್ಷದ ಮಹಿಳೆಯೊಬ್ಬರಿಗೆ ಇತ್ತೀಚಿಗೆ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಟ್ರಾನ್ಸ್ಕೆಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (ಟಿಎವಿಐ) ಕಾರ್ಯವಿಧಾನ ಯಶಸ್ವಿಯಾಗಿ ನೆರವೇರಿಸಲಾಯಿತು. ರೋಗಿಯು ಕಳೆದ ಮೂರು ತಿಂಗಳಿನಿಂದ ವಯೋಸಹಜ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ದಾಗ, ಅವರು ತೀವ್ರವಾದ (ಅಯೋರ್ಟಿಕ್ ಸ್ಟೆನೋಸಿಸ್) ಮಹಾಪಧಮನಿಯ ಕವಾಟ ಕಿರಿ ದಾಗುವಿಕೆ ಸಮಸ್ಯೆ ಹೊಂದಿರುವುದು ಇದಕ್ಕೆ ಕಾರಣವೆಂದು ಪತ್ತೆಯಾಯಿತು.
ಆಕೆಯ ವಯಸ್ಸು ಮತ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ಅಪಾಯ ಸಾಧ್ಯತೆ ಹಿನ್ನೆಲೆಯಲ್ಲಿ, ರೋಗಿ ಮತ್ತು ಆಕೆಯ ಕುಟುಂಬವು ಈ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದ್ದರು. ಪರ್ಯಾಯವಾಗಿ, ಶಸ್ತ್ರಚಿಕಿತ್ಸೆ ರಹಿತ ಟ್ರಾನ್ಸ್ಕೆಥೆಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್(ಟಿಎವಿಐ) ಕಾರ್ಯವಿಧಾನವನ್ನು ಶಿಫಾರಸ್ಸು ಮಾಡಲಾಯಿತು. ಟಿಎವಿಐ ಚಿಕಿತ್ಸೆಯಲ್ಲಿ ಕಿರಿದಾದ ಹೊಂದಿಕೊಳ್ಳುವ ಟ್ಯೂಬ್ ಅನ್ನು (ಕ್ಯಾತಟರ್ ಎಂದು ಕರೆಯಲಾಗುತ್ತದೆ) ಕಾಲಿನ ಮೇಲಿನ ಭಾಗ ಅಥವಾ ಎದೆಯಲ್ಲಿ ರಕ್ತನಾಳಗಳ ಮೂಲಕ ಹೃದಯದ ಮಹಾಪಧಮನಿಯ ಕವಾಟದ ಕಡೆಗೆ ರವಾನಿಸಿ ಕವಾಟದ ಬದಲಾವಣೆ ಮಾಡಲಾಗುತ್ತದೆ.
ರೋಗಿಯ ಆರೋಗ್ಯ ಸ್ಥಿತಿಯ ಸಮಗ್ರ ಮೌಲ್ಯಮಾಪನದ ನಂತರ, ಆಸ್ಪತ್ರೆಯ ಅತ್ಯಾಧುನಿಕ ಹೃದಯ ಕ್ಯಾಥೆಟರೈಸೇಶನ್ ಪ್ರಯೋಗಾಲ ಯದಲ್ಲಿ ಟಿಎವಿಐ’ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಡೆಸಲಾಯಿತು. ವೈದ್ಯಕೀಯ ತಂಡದಲ್ಲಿ ಬೆಂಗ ಳೂರಿನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾ ಲಜಿಸ್ಟ್ ಮತ್ತು ಮೆರಿಲ್ ಲೈಫ್ ಸೈನ್ಸಸ್‌ನ ಟಿಎವಿಐ ಕಾರ್ಯಕ್ರಮದ ಪ್ರೊಕ್ಟರ್ ಡಾಟಟ ಬಿ.ಸಿ.ಶ್ರೀನಿವಾಸ್, ಶಿವಮೊಗ್ಗದ ನಂಜಪ್ಪ ಲೈಫ್ ಕೇರ್‌ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾಟಟ ಜೆ. ನರೇಂದ್ರ ಮತ್ತು ಹಿರಿಯ ಹೃದಯ ಅರಿವಳಿಕೆ ತಜ್ಞರಾದ ಡಾಟಟ ಟಿ.ಎಸ್.ಹರೀಶ್ ಇದ್ದರು. ಸುಗಮ ಮತ್ತು ಪರಿಣಾಮಕಾರಿ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಲು ಇಡೀ ಕಾರ್ಡಿಯಾಕ್ ಕ್ಯಾಥ್ಲ್ಯಾಬ್ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ ತಂಡವು ಒಟ್ಟಾಗಿ ಕೆಲಸ ಮಾಡಿತು.
ಟಿಎವಿಐ ಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯನ್ನು ಸಂಪೂರ್ಣವಾಗಿ ರೋಗ ಲಕ್ಷಣರಹಿತವಾಗಿ ಮನೆಗೆ ಕಳುಹಿಸಲಾಯಿತು. ಅಂದಿನಿಂದ ಅವರು ಯಾವುದೇ ಅಡಚಣೆಗಳಿಲ್ಲದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾ ರಂಭಿಸಿದ್ದಾರೆ ಮತ್ತು ಪ್ರಸ್ತುತ ರಕ್ತ ತೆಳುಗೊಳಿಸುವಿಕೆ ಸೇರಿದಂತೆ ಕನಿಷ್ಠ ಪ್ರಮಾಣದ ಹೃದಯ ಸಂಬಂ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರೆ.