ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

Kranti Deepa

ಶಿವಮೊಗ್ಗ,ಡಿ.18  : ಕಾಲೇಜಿನಲ್ಲಿಯೇ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ  ನಂಜಪ್ಪ  ಲೇ ಔಟ್ ನಲ್ಲಿರುವ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ  ದ್ವಿತಿಯ ಪಿಯು ವಿದ್ಯಾರ್ಥಿನಿ ಮೂರ್ಛೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

ಕಾಲೇಜಿನಲ್ಲಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥಗೊಂಡು ಪ್ರಿನ್ಸಿಪಾಲ್ ರೂಮ್‌ನ ಬಾಗಿಲಲ್ಲಿಯೇ ವಿದ್ಯಾರ್ಥಿನಿ ಕುಸಿದುಬಿದ್ದಿದ್ದಳು. ತಕ್ಷಣವೇ ಅಲ್ಲಿಂದ ಕಾರೊಂದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿನಿ ಓದಿದ್ದ ಹೈಸ್ಕೂಲಿನ ಶಿಕ್ಷಕರು ಕಾಲೇಜಿಗೆ ಬಂದಿದ್ದರು. ಅವರನ್ನು ಮಾತನಾಡಿಸಲು ತೆರಳುತ್ತಿದ್ದ ವೇಳೆ ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾಳೆ. ಈ ದೃಶ್ಯ ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Share This Article
";