ಶಿವಮೊಗ್ಗ,ಅ.07:ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕ್ರಾಂಗ್ರೆಸ್ ಮುಖಂಡ ಹಾಗೂ ಕೊಡುಗೈ ದಾನಿ ಎಂ. ಶ್ರೀಕಾಂತ್ ಸಾರಥ್ಯದ ಸದ್ಬಾವನ ಎಜು ಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೋಮವಾರ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ, ಗೌರವಿಸಲಾಯಿತು.
ನಗರದ ವೀರಶೈವ ಕಲ್ಯಾಣಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭ ದಲ್ಲಿ ಮಹಾನಗರ ಪಾಲಿಕೆಯ ನೂರಾರು ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಗೌರವಿಸಿದರು.
ವೇದಿಕೆಯಲ್ಲಿ ಬಾಗಿನ ಸ್ವೀಕರಿಸಿ ಮಹಿಳಾ ಪೌರ ಕಾರ್ಮಿಕರು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರ ಸಾಮಾಜಿಕ ಸೇವಾ ಕಾರ್ಯಕ್ಕೆ ಪ್ರತಿಕ್ರಿಯಿಸಿ, ಸೀರೆ ಕೊಟ್ಟು ಬಾಗಿನ ನೀಡುವ ಮೂಲಕ ನಮ್ಮನ್ನು ಸಹೋದರಿ ಯರಂತೆ ಕಾಣುವ ಶ್ರೀಕಾಂತ್ ಮನಸು ದೊಡ್ಡ ಮನಸು. ಇಂತಹದೊಂದು ಪುಣ್ಯದ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ. ಅವರ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಮುಕ್ತ ಕಂಠದಿಂದ ಬಣ್ಣಿಸಿದರು.
ವೀರ ಶೈವ ಸಮಾಜದ ಮುಖಂಡ ಮಹೇಶ್ವರಪ್ಪ, ಪಾಲಿಕೆ ಪೌರ ಕಾರ್ಮಿಕರ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ ಮಾತನಾಡಿದರು.
ವೇದಿಕೆಯಲ್ಲಿ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯೆ ನಿರ್ಮಲ ಕಾಶಿ, ಪಾಲಿಕೆಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯೆ ಗಾಡಿಕೊಪ್ಪ ರಾಜಣ್ಣ, ಪೌರ ಕಾರ್ಮಿಕರ ಸಂಘದ ಮುಖಂಡರಾದ ಪ್ರಕಾಶ್, ಕುಮಾರ್, ಮಂಜುನಾಥ್, ಪಾಲಿಕೆ ಆರೋಗ್ಯಾಕಾರಿ ವೇಣುಗೋಪಾಲ್ ಸೇರಿ ಹಲವರು ಇದ್ದರು.
ಪ್ರತಿ ವರ್ಷ ಗೌರಿ ಹಬ್ಬದ ವೇಳೆಯೇ ನಾವು ಪಾಲಿಕೆಯ ಮಹಿಳಾಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಗುತ್ತಿತ್ತು. ಈ ಬಾರಿ ಸ್ವಲ್ಪ ತಡವಾಯಿತು. ನವರಾತ್ರಿ ವೇಳೆಯೇ ಕೊಡೋಣ ಅಂತ ತೀರ್ಮಾನಿಸಿ ಇಂದು ಅದನ್ನು ಪೂರೈಸಿದ್ದೇವೆ. ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ನಗರವನ್ನು ಸ್ವಚ್ಚವಾಗಿಡುವ ಅವರ ಕೆಲಸದಿಂದಲೇ ಜನಪ್ರತಿನಿಗಳಿಗೂ ಗೌರವ ಸಿಗುತ್ತದೆ. ಹಾಗಾಗಿ ಅವರನ್ನು ಗೌರವಿಸುವ ಕೆಲಸ ಎಲ್ಲರಿಂದಲೂ ಆಗಬೇಕು.
-ಎಂ. ಶ್ರೀಕಾಂತ್, ಕಾಂಗ್ರೆಸ್ ಮುಖಂಡರು