ಶಿವಮೊಗ್ಗ,ಫೆ.05 : ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕೆಎಸ್‌ಐಎಸ್‌ಎ- ಪೊಲೀಸ್ ಕಪ್-2026 ಟ್ರೋಫಿ ಅನಾವರಣ ಗೊಳಿಸಿ ಮಾತನಾಡಿದ ಅವರು, ದೈನಂದಿನ ಒತ್ತಡದ ಬದುಕಿನಿಂದ ಹೊರಬರಬೇಕಾದರೆ ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಆರೋಗ್ಯಯುತ ಆಟವನ್ನು ಆಡುವ ಮೂಲಕ ಪಂದ್ಯಾವಳಿಯನ್ನು ಸ್ನೇಹಮಯಗೊಳಿಸಬೇಕು. ಆ ಮೂಲಕ ನಿಮ್ಮಲ್ಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ತಹಶೀಲ್ದಾರ್ ಪ್ರದೀಪ್ ಮಾತನಾಡಿ, ನಮ್ಮ ಸಮುದಾಯದಲ್ಲಿ ಇರುವಂತಹ ಸರ್ಕಾರಿ ನೌಕರರು ಇತರೆ ವರ್ಗದವರು ಎಲ್ಲರೂ ಸಹ ಸಮಾಜಕ್ಕಾಗಿ ದುಡಿ ಯುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರು ಪರಿಚಯವೇ ಇರುವುದಿಲ್ಲ . ಅಲ್ಲದೇ ನಮ್ಮಗಳ ವೈಯಕ್ತಿಕ ಬದುಕಿನಲ್ಲಿ ಏನಾದರೂ ತೊಂದರೆಯಾದರೆ ಅದಕ್ಕೆ ಸಹಕಾರವೂ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಕ್ರೀಡಾಕೂಟಗಳು ಪರಸ್ಪರರನ್ನು ಪರಿಚಯಿಸುವುದರ ಜೊತೆಗೆ ಬದುಕಿನಲ್ಲಿ ಅನುಕೂಲವನ್ನು ಕಲ್ಪಿಸಿಕೊಡುತ್ತದೆ ಎಂದು ಹೇಳಿದರು.
ಕೆಎಸ್‌ಐಎಸ್‌ಎ-ನ 2ನೇ ಪಡೆ ಕಮಾಂಡೆಂಟ್ ಕೆ.ಆರ್.ಶಿವಪ್ರಕಾಶ್ ಮಾತನಾಡಿ, ಕಳೆದ ವ 20 ತಂಡ ಗಳು ಭಾಗವಹಿಸಿದ್ದವು. ಈ ಬಾರಿ 24 ತಂಡಗಳು ಭಾಗ ವಹಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಕೆಎಸ್‌ಆರ್‌ಪಿಯ ೮ನೇ ಕಮಾಂಡೆಂಟ್ ಯುವಕುಮಾರ್ ಮಾತನಾಡಿ, ಸ್ನೇಹ ಮತ್ತು ಉತ್ಸುಕತೆ ಈ ಪಂದ್ಯಾವಳಿಯಿಂದ ಹೆಚ್ಚಾಗುತ್ತದೆ. ಕ್ರೀಡಾಕೂಟ ಯಶಸ್ವಿಯಾಗಿ ನಡೆಯುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆರೋಗ್ಯ ಸಂಪತ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ . ತಮ್ಮ ದುಡಿಮೆ ಎಷ್ಟೇ ಇದ್ದರೂ ಆರೋಗ್ಯ ಸರಿ ಇರಲಿಲ್ಲ ಎಂದರೆ ನೆಮ್ಮದಿಯೇ ಇರುವುದಿಲ್ಲ . ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆ ಹೆಚ್ಚಿನ ಸಹಕಾರ ನೀಡುತ್ತದೆ. ಕ್ರೀಡಾಕೂಟಗಳಿಂದ ಪರಸ್ಪರ ಸೌಹಾರ್ದಯುತ ಮತ್ತು ಒಬ್ಬರಿಗೊಬ್ಬರು ಸ್ನೇಹಿತರಾಗುವಂತಹ ಅವಕಾಶ ದೊರೆಯುತ್ತದೆ.
-ಎನ್. ಮಂಜುನಾಥ್, ಪ್ರೆಸ್‌ಟ್ರಸ್ಟ್ ಅಧ್ಯಕ್ಷ
