ಎಸ್ ಪಿ ಮಿಥುನ್‌ಕುಮಾರ್ ವರ್ಗಾವಣೆ: ನಿಖಿಲ್ ನೂತನ ಎಸ್‌ಪಿ

Kranti Deepa

ಶಿವಮೊಗ್ಗ,ಡಿ.31  : ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್‌ಕುಮಾರ್ ಅವರನ್ನು ಸರಕಾರ ವರ್ಗಾಯಿಸಿದೆ. ಅವರ ಸ್ಥಾನಕ್ಕೆ ಕೋಲಾರ ಎಸ್ ಪಿ ಬಿ. ನಿಖಿಲ್ ಆಗಮಿಸಲಿದ್ದಾರೆ.
ಮಿಥುನ್‌ಕುಮಾರ್ ಅವರನ್ನು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಆಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಮೂರು ವರ್ಷ ಯಶಸ್ವಿ ಎಸ್‌ಪಿಯಾಗಿ ಕೆಲಸ ಮಾಡಿರುವ  ಅವರು, ಉತ್ತಮ ಕೆಲಸಗಳಿಂದ ಸಾರ್ವಜನಿಕರ ಪ್ರಸಂಸೆ ಗಳಿಸಿದ್ದಾರೆ.

ನೂತನ ಎಸ್ ಪಿ ನಿಖಿಲ್ ಬುಳ್ಳಾವರ  33 ರ ಹರಯದವರಾಗಿದ್ದು,  ಚಿತ್ರದುರ್ಗ ಜಿಲ್ಲೆಯವರು. ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿಯನ್ನು 107 ನೆ ರ್‍ಯಾಂಕ್‌ನಲ್ಲಿ ಪಾಸು ಮಾಡಿ,2014 ರಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅದಿಕಾರಿಯಾಗಿ ಸೇರಿದ್ದಾರೆ.

ರಾಯಚೂರು ಮತ್ತು ಭಟ್ಕಳದಲ್ಲಿ ಎಎಸ್‌ಪಿಯಾಗಿ, ಕಾರ್ಕಳದ ನಕ್ಸಲ್ ನಿಗ್ರಹ ದಳದ ಎಸ್‌ಪಿಯಾಗಿ, ನಂತರ ಕೋಲಾರ ಎಸ್ ಪಿಯಾಗಿ ಹಾಲಿ ಸೇವೆಯಲ್ಲಿದ್ದಾರೆ. ಇನ್ನು ಶಿವಮೊಗ್ಗ ಎಸ್‌ಪಿಯಾಗಿ ಅವರು ಆಗಮಿಸಲಿದ್ದಾರೆ.

Share This Article
";