ದಕ್ಷಿಣ ಭಾರತದ ಪ್ರತಿಷ್ಠಿತ ವಜ್ರಾಭರಣ ಪ್ರದರ್ಶನ

Kranti Deepa
ಶಿವಮೊಗ್ಗ,ಏ.9 : ಬಹು ನಿರೀಕ್ಷಿತ ಮತ್ತು ಪ್ರತಿಷ್ಠಿತ ವಜ್ರಾಭರಣ ಪ್ರದರ್ಶನವಾದ ವಿಶ್ವವಜ್ರ ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಇರುವ ಸುಲ್ತಾನ್ ಡೈಮಂಡ್ಸ್  ಮತ್ತು ಗೋಲ್ಡ್ ಶೋರೂಮ್‌ನಲ್ಲಿ ಭವ್ಯವಾಗಿ ಆರಂಭವಾಗಿದೆ.
ಈ ಪ್ರದರ್ಶನವನ್ನು ಡಾ|| ಮಿಸ್ಬಾ ನಜಮ್  ಉದ್ಘಾಟಿಸಿದರು.  ಗೌರವಾನ್ವಿತ ಅತಿಥಿಗಳಾಗಿ ಡಾ|| ಆಸಿಯಾ, ಶ್ವೇತಾ (ವ್ಯವಹಾರ), ಸನಾ ಶುಭಾ (ವ್ಯವಹಾರ), ನಯನಾ (ವ್ಯವಹಾರ), ಚೈತ್ರಾ ಕುಮಾರ್ (ಲ್ಯಾಬ್ ಇನ್-ಚಾರ್ಜ್) ಮತ್ತು ಶ್ರುತಿ (ಮೇಕಪ್ ಆರ್ಟಿಸ್ಟ್)  ಭಾಗವಹಿಸಿದ್ದರು.
ಈ ವಿಶೇಷ ಪ್ರದರ್ಶನದಲ್ಲಿ ಅದ್ಭುತವಾದ ವಜ್ರಾಭರಣಗಳ ಸಂಗ್ರಹವನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಬ್ರೈಡಲ್ ಸ್ಟೇಟ್ಮೆಂಟ್ ಜ್ವೆಲರಿ, ಪರಂಪರೆಯ ಕ್ಲೋಸ್ ಸೆಟ್ಟಿಂಗ್ ವಜ್ರಾಭರಣಗಳು, ವೈವಿಧ್ಯಮಯ ತನ್‌ಮಾನಿಯಾ ಸಂಗ್ರಹಗಳು ಹಾಗೂ ದಿನನಿತ್ಯ ಧರಿಸಲು  ಸೂಕ್ತವಾದ ಹಗುರವಾದ ವಜ್ರಾಭರಣ ಗಳು ಸೇರಿವೆ.
ವಿಶೇಷ ಆಫರ್‌ಗಳು: ಗ್ರಾಹಕರು ವಜ್ರ ಮೌಲ್ಯ ದಲ್ಲಿ ಶೇ. 20 ರವರೆಗೆ ರಿಯಾಯಿತಿ ಮತ್ತು ಚಿನ್ನದ ಆಭರಣಗಳ ಮೆಕಿಂಗ್ ಚಾರ್ಜ್ ಮೇಲೆ ಶೆ. 50 ರಷ್ಟು ರಿಯಾಯಿತಿ ಪಡೆಯಬಹುದು. ಈ ಪ್ರದರ್ಶನವು ಏಪ್ರಿಲ್ 30, 2026 ರವರೆಗೆ ಸಾರ್ವಜನಿಕರಿಗೆ ತೆರೆಯಲಾಗಿದೆ.
ಈ ಕಾರ್ಯಕ್ರಮದಲ್ಲಿ ಕ್ಲಸ್ಟರ್ ಮ್ಯಾನೇಜರ್ ಅಜಿತ್ ಪಿ ವಿ, ಶಿವಮೊಗ್ಗ ಶಾಖಾ ವ್ಯವಸ್ಥಾಪಕ ಶಿಂಟೋ, ಸಹಾಯಕ ವ್ಯವಸ್ಥಾಪಕರಾದ ನಿರ್ಮಲ್ ಮತ್ತು ಜಬ್ಬಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share This Article
";