ಶಿವಮೊಗ್ಗ,ಫೆ. 7: ಸಾಗರ ಕಡೆಯಿಂದ ಶಿವಮೊಗ್ಗದತ್ತ್ತ ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರು ತಡೆದ ಪರಿಶೀಲನೆ ನಡೆಸಿದ ಪೊಲೀಸರು ಶಿವಮೊಗ್ಗದ ೬ ಯುವಕರನ್ನು ಬಂಧಿಸಿದ್ದಾರೆ.
ಇವದರಿಂದ ಅಂದಾಜು ಮೌಲ್ಯ 1,15,000 ರೂಗಳ 1 ಕೆಜಿ 217 ಗ್ರಾಂ ಅಮಾನತ್ತು ಪಡಿಸಿಕೊಳ್ಳಲಾಗಿದೆ. ದೊಡ್ಡಪೇಟೆ ಸಿಪಿಐ ರವಿ ಪಾಟೀಲ್ , ಎಸ್ ಐ ವಸಂತ್, ನೇತೃತ್ವದ ಮತ್ತು ಸಿಬ್ಬಂಧಿಗಳ ತಂಡವು, ದೊಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲೆನಾಡು ಸಿರಿ ಮುಂಭಾಗ ವಾಹನ ತಪಾಸಣೆ ಮಾಡಿ ಗಾಂಜಾ ಪತ್ತೆ ಮಾಡಿದೆ.
ನಂತರ ಕಾರಿನಲ್ಲಿದ್ದ ಆರೋಪಿತರಾದ ಅಜಾದ್ ನಗರದ ತನ್ವಿರ್ ಪಾಷಾ ಅಲಿಯಾಸ್ ಮಾರ್ಕೆಟ್ ಪೌಜಾನ್ (26 ), ಆರೆಮ್ಮೆಲ್ ನಗರದ ಆಕೀಫ್ ಅಲಿಯಾಸ್ ಪುಕ್ಕಿ (28 ) ವರ್ಷ, ಆಜಾದ್ ನಗರದ ಮೊಹಮ್ಮದ್ ಇಬ್ರಾಹಿಂ ಅಲಿಯಾಸ್ ಮುನ್ನ (25 ), ಇಲಿಯಾಸ್ ನಗರದ ಅರ್ಬಾಜ್ ಖಾನ್ ಅಲಿಯಾಸ್ ಮಜರ್ (26 ) , ಟಿಪ್ಪುನಗರದ ಜಾಫರ್ ಸಾದಿಕ್ (25 ) ಮತ್ತು ಸವಾಯ್‌ಪಾಳ್ಯದ ಅಬ್ದುಲ್ ಅಜೀಜ್ (25 ) ಇವರನ್ನು ಬಂಧಿಸಲಾಗಿದೆ. ಎಸ್ ಪಿ ಮಿಥುನ್‌ಕುಮಾರ್ ಸೂಚನೆಯಂತೆ ತಪಸಣೆ ನಡೆಸಲಾಯಿತು.