ಶಿವಮೊಗ್ಗ, ಅ.06 :ಶಿವಮೊಗ್ಗದ ಚಾಲುಕ್ಯ ನಗರದ ೧೪ ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ನಾಗರ ಹಾವಿಗಿಂದ ೫ ಪಟ್ಟು ಹೆಚ್ಚು ವಿಷ ಹೊಂದಿರುವ ಕಡಂಬಳ ಹಾವನಿ ಮರಿ ಕಾಣಿಸಿಕೊಂಡಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
ಚಾಲುಕ್ಯ ನಗರದ ನಿವಾಸಿಯ ಮನೆಯೊಳಗೆ ಕಡಂಬಳ ಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆಯವರು ಗಾಬರಿಗೊಂಡು ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ಸುಮಾರು ಒಂದೂವರೆ ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ಇದು ಅತೀ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದ್ದು, ಇದರ ವಿಷವು ನಾಗರಹಾವಿನ ವಿಷಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ಉರಗ ತಜ್ಞ ಸ್ನೇಕ್ ಕಿರಣ್ ತಿಳಿಸಿದ್ದಾರೆ. ಆದ್ದರಿಂದ ಮನೆಯ ಸುತ್ತಮುತ್ತ ಇಂತಹ ಹಾವುಗಳು ಕಂಡರೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.