ದಕ್ಷಿಣ ಕನ್ನಡ,ಆ.26 : ಧರ್ಮಸ್ಥಳ ಪ್ರಕರಣ ಸಂಬಂಧ ಉಜಿರೆಯಲ್ಲಿರುವ ಮಹೇಶ್ ತಿಮರೋಡಿ ಮನೆಯಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.ಆರೋಪಿ ಚಿನ್ನಯ್ಯನನ್ನು ಕರೆತಂದಿರುವ ಎಸ್ ಐಟಿ ಅಧಿಕಾರಿಗಳು ಮಹೇಶ್ ತಿಮರೋಡಿ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿ ಚಿನ್ನಯ್ಯ ಇರುತ್ತಿದ್ದ ಕೊಠಡಿಯಲ್ಲಿ ಎಸ್ ಐ ಟಿ ಶೋಧ ಕಾರ್ಯ ನಡೆಸಿದ್ದು ಚಿನ್ನಯ್ಯ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಹೇಶ್ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶೋಧ ಕಾರ್ಯಮುಂದುವರೆದಿದೆ.
ಮಹೇಶ್ ತಿಮರೋಡಿ ಮನೆ ಮೇಲೆ SIT ದಾಳಿ, ಶೋಧ; ಕೆಲ ದಾಖಲೆಗಳು ವಶಕ್ಕೆ
