ಶಿವಮೊಗ್ಗ, ಫೆ. 24 : 12 ಕೇಸುಗಳ ಸರದಾರ, ರೌಡಿಶೀಟರ್ ನನ್ನು ಗೆ ಇಂದು ಬೆಳಗ್ಗೆ ಪೊಲೀಸರು ಸೆರೆಹಿಡಿಯಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಸಂದರ್ಭದಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದ ಘಟನೆ ಇಂದು ಭದ್ರಾವತಿಯಲ್ಲಿ ಸಂಭವಿಸಿದೆ. ಶಾಹಿದ್ ಗಾಯಗೊಂಡ ಆರೋಪಿ.
ಈತ ಈ ಹಿಂದೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಹಾಗೂ ಕೊಲೆ ಯತ್ನದ ಪ್ರಕರಣದ ಸಂಬಂಧ ಪೊಲೀಸರಿಗೆ ಬೇಕಾಗಿದ್ದ. ಈತನ ಇರುವಿಕೆ ಅರಿತು ಬಂಧಿಸಲು ಪೇಪರ್ ಟೌನ್ ಎಸ್ಚೈ ನಾಗಮ್ಮ ಮತ್ತು ಸಿಬ್ಬಂದಿ ನಾಗರಾಜ ತೆರಳಿದ್ದರು. ಈ ವೇಳೆ ಕಾನಸ್ಟೇಬಲ್ ನಾಗರಾಜ ಮೇಲೆ ದಾಳಿ ನಡೆಸಿ ಎಸ್ ಐಗೂ ಹಲ್ಲೆ ನಡೆಸಲುಮುಂದಾದಾಗ ಪೊಲೀಸರು ಗುಂಡು ಹಾರಿಸಿದರೆಂದು ಎಸ್ ಪಿಮಿಥುನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸ ಲಾಗಿದೆ. ಪ್ರಕರಣ ದಾಖಲಾಗಿದೆ.