ಶಿವಮೊಗ್ಗ, ಜೂ.17 : 2025-26 ನೆಯ ಸಾಲಿನ ಸಾಲಿನ ನೀಟ್ ಪರೀಕ್ಷ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವೈದ್ಯಕೀಯ ಪ್ರವೇಶ ಸಿದ್ಧತೆಗಾಗಿ ಮೀಸಲಾದ, ಮಲೆನಾಡಿನ ಪ್ರಪ್ರಥಮ ರೆಸಿಡೆನ್ಶಿಯಲ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿಯು ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ ಆರ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಬಾರಿಯ ನೀಟ್-2025 ರ ಫಲಿತಾಂಶದಲ್ಲಿ ದೇಶ್ ನೀಟ್ ಅಕಾಡೆಮಿಯ ಸುಮಾರು 45 ಕ್ಕೂ ಹೆಚ್ಚು ವಿದ್ಯಾಥಿಗಳು ಮೆಡಿಕಲ್ ಸೀಟ್ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ದೇಶ್ ನೀಟ್ ಅಕಾಡೆಮಿಯ ಕೆ. ರೀತು ಅಕ್ಷಯ 558 , ಸ್ಮಿತಾ ಡಿಮೆಲ್ಲೊ 524, ಎ ಎನ್ ದೀಕ್ಷಿತ್ 522 , ಫಣಿರಾಜ್ 516, ಸಿ ಡಿ ಅರುಣ್ 511 , ಕೆ ಜಿ ಆತ್ಮೀಯ 508, ಮೋಹನ್ ಪಾಟೀಲ್ 504, ಸುಚಿಂತ್ ಎಸ್ 502, ಎಚ್ ಸಿ ವರ್ಷಾ 500 ಅಂಕ ಗಳಿಸುವ ಮೂಲಕ ಅದ್ಭುತ ಸಾಧನೆ ಮೆರೆದು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ ಎಂದರು.ಇದೇ ಅಕಾಡೆಮಿಯ ವಿದ್ಯಾರ್ಥಿ ಹರ್ಷ ಎಚ್ ಜಿ 96.28 , ಕ್ಯಾಟ್ ಆಲ್ ಇಂಡಿಯಾ ರ್ಯಾಂಕ್ 561 ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
ಅಕಾಡೆಮಿಯ ಬಿ ಜಿ ಕೀರ್ತನ್ ೪೮೮, ಭುವನ್ ಬಿ ಕೆ 484, ರಕ್ಷಿತ್ ಎಚ್ ಎಸ್ 482, ಹರ್ಷಾ ಎಚ್ ಜಿ 477 , ಆಸ್ಮಿತಾ 473 , ಸೃಷ್ಟಿ ಎಸ್ ಗೌಡ 471, ಎಂ ಸಂಜನಾ 464, ಆಯೇಷಾ ಹಸನ್ 460, ದೀಪ್ತಿ ಎ ಂ ಬಿ 460, ಮನೋಜ್ ಜಿ ಜೆ 460, ಚಿಂತನ್ ಜಿ ಟಿ 458 ಹಾಗೂ ಟಿ. ನಂದನ್ 458 ಅಂಕ ಗಳಿಸಿ ಡಿಸ್ಟಿಂಕ್ಷನ್ ಮೂಲಕ ಉತ್ತೀರ್ಣರಾಗಿದ್ದಾರೆ ಎಂದರು.
ಈ ರೀತಿಯ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಯಿಂದ ಅಕಾಡೆಮಿಗೆ ಕೀರ್ತಿಯನ್ನು ತಂದಕೊಟ್ಟಿರುವ ಹಾಗೂ ವೈದ್ಯಕೀಯದ ಕನಸು ಈಡೇರಿಸಿಕೊಂಡ ವಿದ್ಯಾರ್ಥಿಗಳೆಲ್ಲರಿಗೂ ಅಕಾಡೆಮಿಯ ಆಡಳಿತ ಮಂಡಳಿ , ಬೋಧಕ-ಬೋಧಕೇತರರು ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. 2025-26 ರ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಯವರು ಇದರ ಪ್ರಯೋಜನ ಪಡೆಯಬೇಕೆಂದರಲ್ಲೆ, ಹೆಚ್ಚಿನ ಮಾಹಿತಿಗೆ 9663861713 , 7019255688 ಈ ನಂಬರಿಗೆ ಸಂಪರ್ಕಿಸಬಹುದು ಎಂದರು.