ಶಿವಮೊಗ್ಗ: ಪ್ರತಿಷ್ಠಿತ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ಗೆ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಎನ್.ಮಂಜುನಾಥ್, ಉಪಾಧ್ಯಕ್ಷರಾಗಿ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿಯಾಗಿ ನಾಗರಾಜ್ ನೇರಿಗೆ, ಸಹಕಾರ್ಯದರ್ಶಿಯಾಗಿ ಸಂತೋಷ್ ಕಾಚಿನಕಟ್ಟೆ ಹಾಗೂ ಖಜಾಂಚಿಯಾಗಿ ಹಿರಿಯ ಪತ್ರಕರ್ತ ಹುಲಿಮನೆ ತಿಮ್ಮಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸರ್ವಟ್ರಸ್ಟಿಗಳ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಪತ್ರಕರ್ತರ ಕ್ಷೇಮಾಬಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಶಿವಮೊಗ್ಗ ಪ್ರೆಸ್ಟ್ ವತಿಯಿಂದ ಪತ್ರಕರ್ತರಿಗಾಗಿ ಆರೋಗ್ಯ ನಿಧಿಯೊಂದನ್ನು ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಚಂದ್ರಶೇಖರ್ ಶೃಂಗೇರಿ, ರಾಮಚಂದ್ರ ಗುಣಾರಿ, ಆರಗ ರವಿ, ನಿರ್ಗಮಿತ ಖಜಾಂಚಿ ಜೇಸುದಾಸ್, ಸಂಪಾದಕರ ಸಂಘದ ಅಧ್ಯಕ್ಷ ಎಸ್.ಕೆ.ಗಜೇಂದ್ರ ಸ್ವಾಮಿ, ವಿ.ಸಿ.ಪ್ರಸನ್ನ, ಪಿ.ಸಿ.ನಾಗರಾಜ್, ಗೋವ ಮೋಹನಕೃಷ್ಣ, ಕಿರಣ್ ಕಂಕಾರಿ, ನವೀನ್ ಪುರದಾಳು, ವಿನಯ್ ತೇಕಲೆ, ಚಿರಾಗ್ ಸೇರಿದಂತೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಟ್ರಸ್ಟಿಗಳು ಹಾಜರಿದ್ದರು.
