ಶಿವಮೊಗ್ಗ ಪ್ರೆಸ್ ಟ್ರಸ್ಟ್ ವಾರ್ಷಿಕ ಪ್ರಶಸ್ತಿ ಪ್ರಕಟ

Kranti Deepa

ಶಿವಮೊಗ್ಗ, ಏ.10 : ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಿರಿಯ ಪತ್ರಕರ್ತರಿಗೆ ಪಿ. ಲಂಕೇಶ್ ಹೆಸರಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಕೊಡುತ್ತಿದ್ದು, ಹಿರಿಯ ಸಂಪಾದಕ ಎಸ್. ಚಂದ್ರಕಾಂತ್ ಸೇರಿದಂತೆ ಮೂವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ.

ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಲಂಕೇಶ್ ಪ್ರಶಸ್ತಿಗೆ 2022,2023,2024 ನೇ ಸಾಲಿನವರೆಗೆ ಕ್ರಮವಾಗಿ ಗೋಪಾಲ್ ಯಡಗೆರೆ, ಎಸ್. ಚಂದ್ರಕಾಂತ್ ಹಾಗೂ ಕೆ. ತಿಮ್ಮಪ್ಪ ಅವರಿಗೆ ಪಶಸ್ತಿ, ತೀರ್ಥಹಳ್ಳಿಯ ಶಿವಾನಂದ ಕರ್ಕಿ ಮತ್ತು ಸೊರಬದ ಹೆಚ್.ಕೆ.ಎಸ್ ಸ್ವಾಮಿ ಅವರಿಗೆ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಜಿಲ್ಲೆಯವರೇ ಆದ ಪಿ.ಲಂಕೇಶ್ ಹೆಸರಿನ ಪ್ರಶಸ್ತಿಗೆ ಮೂವರು ಹಿರಿಯರನ್ನು ಅವರ ಜೀವಮಾನ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 20 ಸಾವಿರ ನಗದು, ಸ್ಮರಣಿಕೆ, ಸನ್ಮಾನ ಪತ್ರವನ್ನು ಒಳಗೊಂಡಿದೆ. ಕ್ರಿಯಾಶೀಲ ಪ್ರಶಸ್ತಿಯು ತಲಾ 10 ಸಾವಿರ ನಗದು ಮತ್ತು ಸ್ಮರಣಿಕೆ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿದೆ. ಜೀವಮಾನವಿಡೀ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳೇ ಗುರುತಿಸಬೇಕು. ಪತ್ರಕರ್ತರ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಈ ಪ್ರಶಸ್ತಿ ನೀಡುವ ಮೂಲಕ ಪತ್ರಕರ್ತರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಪತ್ರಿಕೋದ್ಯಮ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಜೀವಮಾನ ಸಾಧನೆಗಾಗಿ ಹಿರಿಯ ಪತ್ರಕರ್ತರನ್ನು ಗೌರವಿಸಲಾಗುತ್ತಿದೆ. ಇದು ವೃತ್ತಿಗೆ ಬರುವ ಹೊಸ ತಲೆಮಾರಿಗೆ ಸ್ಪೂರ್ತಿಯಾಗಬೇಕು. ಟ್ರಸ್ಟ್ ಪತಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕೆಲಸಗಳೊಂದಿಗೆ ಸಂಕಷ್ಟಕ್ಕೆ ಸಮಾಜಮುಖಿ ಪತ್ರಕರ್ತರ ಸ್ಪಂದಿಸುತ್ತಾ ಸದಾ ಬಂದಿದೆ. ಹಿರಿಯ ಪತ್ರಕರ್ತರನ್ನು ಗೌರವಿಸುತ್ತಿರುವುದು ಗುರುತಿಸಿ ಸಂತೊಷದ ಸಂಗತಿ ಎಂದರು.

ಖಜಾಂಚಿ ಪಿ.ಜೇಸುದಾಸ್, ಟ್ರಸ್ಟಿಗಳಾದ ಹೊನ್ನಾಳಿ ಚಂದ್ರ ಶೇಖರ್, ಸಂತೋಷ್ ಕಾಚಿನಕಟ್ಟೆ, ರಾಮಚಂದ್ರ ವಿ ಗುಣಾರಿ, ಗಜೇಂದ್ರ ಸ್ವಾಮಿ, ಪಿ.ಸಿ.ನಾಗರಾಜ್, ಗೋವ ಮೋಹನ ಕೃಷ್ಣ, ಶಿವಮೊಗ್ಗ ನಾಗರಾಜ್, ವಿ.ಸಿ.ಪ್ರಸನ್ನ, ಕಿರಣ್ ಕಂಕಾರಿ ಹಾಜರಿದ್ದರು.

ಪ್ರಶಸ್ತಿ ಪ್ರದಾನ ಎ. 14 ಕ್ಕೆ
ಎ. 14 ರ ಅಂಬೇಡ್ಕರ್ ಜಯಂತಿಯಂದು ಸಂಜೆ ೫ ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿಂತಕ, ಸಾಹಿತಿ, ನಾಡೋಜ ಕುಂ.ವೀರಭದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮತ್ತೊಬ್ಬ ಚಿಂತಕ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಮುಖ್ಯ ಅತಿಥಿಯಾಗಿ ಆಗಮಿಸುವರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಮುಂದಿನ ವರ್ಷಗಳಲ್ಲಿ ಇದು ನಿರಂತರವಾಗಿ ನಡೆಯಲಿದೆ.
– ಎನ್. ಮಂಜುನಾಥ, ಅಧ್ಯಕ್ಷ

Share This Article
";