ಶಿವಮೊಗ್ಗ,ಫೆ. 3: ಶಂಕರ ಕಣ್ಣಿನ ಆಸ್ಪತ್ರೆಯ ಸೇವೆ ಅನನ್ಯವಾಗಿದ್ದು, ಈಗ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಹಿರರೋಗಿಗಳ ವಿಭಾಗ ಆರಂಭಿಸಿದೆ. ನಗರ ಮಧ್ಯದಲ್ಲಿ ಇರುವ ಈ ಕೇಂದ್ರ ಜನರಿಗೆ ಮತ್ತಷಟು ಹತ್ತಿರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಎನ್. ಅಭಿಪ್ರಾಯ ಪಟ್ಟರು.
ದುರ್ಗಿಗುಡಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಹೊರರೋಗಿಗಳ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶಂಕರ ಸಂಸ್ಥೆಯ ಸಮಗ್ರ ಸೇವೆ ಶಿವಮೊಗ್ಗದಲ್ಲಿರುವುದು ಹೆಮ್ಮೆಯ ಸಂಗತಿ, ಶಂಕರ ನೇತ್ರ ಕೇಂದ್ರದ ಮೂಲಕ ಇನ್ನು ಹೆಚ್ಚಿನ ಜನರಿಗೆ ನೇತ್ರ ಚಿಕಿತ್ಸಾ ಸೇವೆ ತಲುಪಲಿ ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯಗಳು ಪ್ರಶಂಸನೀಯ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್‌ಕೆ ಎಸ್ ಮಾತನಾಡಿ, ಶಂಕರ ಸಂಸ್ಥೆ ಸಲ್ಲಿಸುತ್ತಿರುವ ಸೇವೆಯು ನಿತ್ಯನೂತನವಾದುದು, ಜಿಲ್ಲಾ ಅಂಧತ್ವ ಮುಕ್ತ ಅಭಿಯಾನ ಕಾರ್ಯಾಕ್ರಮಕ್ಕೆ ಕೈಜೊಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಂಕರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಎಸ್ . ಮಹೇಶ್ ಮಾತನಾಡಿ. ಸಂಸ್ಥೆಯು ನೂತನ ‘ಶಂಕರ ನೇತ್ರ ಕೇಂದ್ರ’ವನ್ನು ಜನರ ಅನುಕೂಲಕ್ಕಾಗಿ ಶಿವಮೊಗ್ಗದ ಹೃದಯ ಭಾಗ ದುರ್ಗಿಗುಡಿಯಲ್ಲಿ ಆರಂಭಿಸಲಾಗಿದೆ. ಶಂಕರ ಕಣ್ಣಿನ ಆಸ್ಪತ್ರೆಯು ಮಲೆನಾಡಿನ ಜನತೆಗೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕಳೆದ ೧೬ ವರ್ಷಗಳಿಂದ ನಿರಂತರ ನೇತ್ರ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಈಗ ನಗರ ಕೇಂದ್ರ ಭಾಗದಲ್ಲಿ ಹೊರ ರೋಗಿ ವಿಭಾಗವನ್ನು ಆರಂಭಿಸಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಸೇವೆಯನ್ನು ವಿಸ್ತೃತಗೊಳಿಸಿದೆ ಎಂದರು.
ಡಾ|| ಮಲ್ಲಿಕಾರ್ಜುನ್ ಶಾಖೆಯ ಧ್ಯೇಯ ಮತ್ತು ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು. ಶಂಕರ ಆಸ್ಪತ್ರೆಯ ಪೋಷಕರುಗಳಾದ ಡಾ|| ನರೇಂದ್ರ ಭಟ್, ಡಾ|| ವೃಂದಾ ಭಟ್, ಡಾ|| ಮಂಜುನಾಥ, ಹಾಗೂ ಡಾ|| ವೆಂಕಟೇಶ್‌ಮೂರ್ತಿ, ಮುಖ್ಯ ಆಡಳಿತಾಧಿಕಾರಿ ಗಾಯತ್ರಿ ಶಾಂತರಾಮ್ ಮತ್ತು ಅನಿತಾ ಉಪಸ್ಥಿತರಿದ್ದರು. ಡಾ|| ರವಿಶಂಕರ್ ವಂದಿಸಿದರು.