ಶಿವಮೊಗ್ಗ,ಸೆ.04 : ಬ್ಯಾಂಕಿಂಗ್, ಎಸ್ ಎಸ್ ಸಿ, ರೈಲ್ವೇಸ್ ಮತ್ತು ಇನ್ಶೂರೆನ್ಸ್ ನಲ್ಲಿ ವಿವಿಧ ಇಲಾಖೆಯ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದರ ಪ್ರಯುಕ್ತ, ಅಚೀವರ್ ಕೋಚಿಂಗ್ ಸೆಂಟರ್ (2015) ಶಿವಮೊಗ್ಗ, ಇವರ ಆಶ್ರಯದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆ. 7ರಂದು ಬೆಳಿಗ್ಗೆ 10.30 ಗಂಟೆಗೆ ತಿಲಕ್ ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿರುವ ಅಚೀವರ್ಸ್ ಕೋಚಿಂಗ್ ಸಂಸ್ಥೆಯಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಒಂದು ದಿನ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಶಿಕ್ಷಕರು, ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 7812926702 / 7337683668 ಗೆ ಸಂಪರ್ಕಿಸಬಹುದಾಗಿದೆ. ಇಲ್ಲವೇ ತಿಲಕ್ ನಗರ, 1ನೇ ಕ್ರಾಸ್‌ನಲ್ಲಿರುವ ಕಛೇರಿಗೆ ಖುದ್ದಾಗಿ ಭೇಟಿ ಮಾಡಬಹುದಾಗಿದೆ ಎಂದರು. ಯಾವುದೇ ಪದವಿ ಓದುತ್ತಿರುವ /,ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ,ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಅಧ್ಯಯನ ಮಾಡುವುದರಿಂದ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ.. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವನ್ನು ತಪ್ಪಿಸಿ ಈ ತರಬೇತಿಯಿಂದ ಮಕ್ಕಳ ಮಾನಸಿಕವಾಗಿ, ದೈಹಿಕವಾಗಿ ಮತ್ತು ನೈತಿಕವಾಗಿ ಪರಿಪೂರ್ಣತೆಯನ್ನು ಹೊಂದಲು ಸಹಕಾರಿಯಾಗುತ್ತದೆ ಎಂದರು.
ಉತ್ತಮ ವಿಷಯತಜ್ಞರು, ಪರಿಣಿತರಿಂದ ತರಗತಿಗಳನ್ನು ಆಯೋಜಿಲಾಗಿದೆ.ಉತ್ತಮ ಅಧ್ಯಯನ ಸಾಮಾಗ್ರಿ, ಅತ್ಯುತ್ತಮ ಅಣುಕು ಪರೀಕ್ಷೆಗಳನ್ನು ಹಾಗೂ ಮೌಲ್ಯಮಾಪನ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಣುಕು ಸಂದರ್ಶನಗಳನ್ನು ಹಾಗೂ ಸ್ವಯಂ ಮೌಲ್ಯಮಾಪನ ಸೌಲಭ್ಯ ಒದಗಿಸಲಾಗಿದೆ ಎಂದರು.ಮಹೇಶ್ , ಪವಿತ್ರಾ, ಅಯಾಜ್ ಮೊದಲಾದವರಿದ್ದರು.