ಬೆಳಗಾವಿಗೆ ಸಕ್ರೆಬೈಲಿನ ಗಜಪಡೆ

Kranti Deepa

ಶಿವಮೊಗ್ಗ,ಜ.08 : ಬೆಳಗಾವಿಯಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿ ಕೊಳ್ಳುತ್ತಾ ಭಯದ ವಾತಾವರಣ ಸೃಷ್ಟಿಸಿರುವ ಕಾಡಾನೆಯನ್ನ ಸೆರೆ ಹಿಡಿಯಲು ಸಕ್ರೆಬೈಲಿನ ಗಜಪಡೆ ಬೆಳಗಾವಿಯತ್ತ ಪಯಣ ಬೆಳೆಸಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಕಾಡಾನೆ ಹಾವಳಿ ಕಂಡುಬಂದಲ್ಲಿ ಅದರ ನಿಯಂತ್ರಣಕ್ಕೆ ಅಥವಾ ಸೆರೆ ಹಿಡಿಯಲು ಸಕ್ರೆಬೈಲಿನ ಗಜಪಡೆಗಳು ಸಜ್ಜಾಗಿರುತ್ತವೆ ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಇಂದು ಬೆಳಗ್ಗೆಯೇ ತಮ್ಮ ಪ್ರಯಾಣವನ್ನ ಆರಂಭಿಸಿದ್ದು ಅಲ್ಲಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನ ಸೆರೆ ಹಿಡಿಯಲಿವೆ.

ಬಾಲಣ್ಣ, ಸೋಮಣ್ಣ, ಬಹದ್ದೂರ್, ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದು ಪಶುವೈದ್ಯ ಡಾ|| ರಮೇಶ್ ನೇತೃತ್ವದಲ್ಲಿ ಈ ಆನೆಗಳ ಮಾವುತರು ಕಾವಾಡಿಗರು ಸಹ ಬೆಳಗಾವಿಗೆ ತೆರಳಿದ್ದಾರೆ.

Share This Article
";