ರೌಡಿ ಗುಂಡನಿಗೆ ಪೊಲೀಸರಿಂದ ಗುಂಡೇಟು

Kranti Deepa

 ಭದ್ರಾವತಿ, ಫೆ. 21 : ಇಲ್ಲಿನ ರೌಡಿಶೀಟರ್ ಮತ್ತು ನಾಲ್ಕು ಪ್ರಕರಣಗಳಲ್ಲಿ‌ ಪೊಲೀಸರಿಗೆ ಬೇಕಾಗಿದ್ದ ಗುಂಡ ಅಲಿಯಾಸ್ ರವಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಗುಂಡ @ ರವಿಯ ಇರುವಿಕೆ ಪತ್ತೆ ಮಾಡಿದ ಪೊಲೀಸರು ಅಲ್ಲಿಗೆ ತೆರಳಿದಾಗ ಪೊಲೀಸರನ್ನು ಕಂಡು ಅವರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದನು. ಆಗ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ರೆಂದು ಎಸ್ ಪಿ‌ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಆರೋಪಿ ಗುಂಡ @ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯ ಪಿಎಸ್‌ಐ ಕೃಷ್ಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಠಾಣೆಯ ಸಿಬ್ಬಂದಿ ಆದರ್ಶನ ಮೇಲೆ ಆರೋಪಿ ಗುಂಡ @ ರವಿ ಹಲ್ಲೆ ಮಾಡಲು ಯತ್ನಿಸಿದ. ಆಗ ಆದರ್ಶನನ್ನು ರಕ್ಷಿಸಲು ಆರೋಪಿ ರವಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಶರಣಾಗಲಿಲ್ಲ.

ಕಾಲಿಗೆ ಗುಂಡು ಹಾರಿಸುವುದು ಅನಿವಾರ್ಯವಾಯಿತು ಎಂದು ಎಸ್ ಪಿ ಹೇಳಿದ್ದಾರೆ. ಗಾಯಗೊಂಡ ಸಿಬ್ಬಂದಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
";