ಶಿವಮೊಗ್ಗ ಜ.7 : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿ. ಆಡಳಿತ ಮಂಡಳಿಗೆ ದಿನಾಂಕ: 12-01-2025 ರಂದು ಚುನಾವಣೆ ನಡೆಯಲಿದ್ದು.
ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದು ಸರಿಯಷ್ಟೇ, ವ್ಯಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ, ನಾಮಪತ್ರ ಹಿಂತೆಗೆದುಕೊಳ್ಳಲು ಹೋದಾಗ ಸಮಯ ಮೀರಿತ್ತು.
ಆದರಿಂದ ಮಾನ್ಯ ಮತದಾರರಲ್ಲಿ ವಿನಂತಿಸುವುದೇನೆಂದರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತರಾಗಿರುವುದನ್ನ ಈ ಮೂಲಕ ಪ್ರಕಟಿಸುತ್ತೇನೆ ಎಂದು ಪೂರ್ಣಿಮ ಸುನೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.