ಶಿವಮೊಗ್ಗ, ಫೆ. 19 : ನಗರದ ಕೀಳಂಬಿ ಮೀಡಿಯಾ ಪ್ರಸ್ತುತಿ ಪಡಿಸುವ ಭಾವತೀರ ಯಾನ ಸದಭಿರುಚಿಯ ಸಿನಿಮಾ ಫೆ. 21 ಕ್ಕೆ ಬಿಡುಗಡೆಯಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೀಳಂಬಿ ಮೀಡಿಯಾ ಲ್ಯಾಬ್ ನ ಮುಖ್ಯಸ್ಥ ರಾಜೇಶ್ ಕೀಳಂಬಿ, ಕುಟುಂಬ ಸಹಿತ ನೋಡುವ ಸಿನಿಮಾ ಇದಾಗಿದೆ. ಜನರಿಗೆ ಇಷ್ಟವಾಗುವ ಕತೆ ಇದರಲ್ಲಿದೆ ರಾಜ್ಯದ 20-25 ಕಡೆ ಮಾತ್ರ ಈ ಸಿನಿಮಾ ಬಿಡುಗಡೆಯಾಗಲಿದೆ. ಶಿವಮೊಗ್ಗದಲ್ಲೂ ಇದರ ಉದ್ಘಾಟನಾ ಪ್ರದರ್ಶನ ಇರಲಿದೆ ಎಂದರು.
ಆರೋಹ ಫಿಲಂಸ್ ಬ್ಯಾನರಿನಡಿ ನಿರ್ದೇಶನವನ್ನು ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಮಾಡಿದ್ದಾರೆ. ನಿರ್ಮಾಪಕರು : ಶೈಲೇಶ್ ಅಂಬೆಕಲ್ಲು, ಲಕ್ಷ್ಮಣ್ ಬಿ.ಕೆ. ಅವರದ್ದಾಗಿದೆ. ಛಾಯಾಗ್ರಹಣ : ಶಿವಶಂಕರ್ ನೂರಂಬಡ ಅವರದ್ದು. ಸಂಗೀತ ಮಯೂರ್ ಅಂಬೆಕಲ್ಲು, ಸಂಕಲನ : ಸುಪ್ರೀತ್ ಬಿ.ಕೆ., ಗಾಯನ ವಾಸುಕಿ ವೈಭವ್ ಅವರದ್ದಿದೆ. ತಾರಾಗಣದಲ್ಲಿ ರಮೇಶ್ ಭಟ್, ತೇಜಸ್ ಕಿರಣ್, ಆರೋಹಿ ನೈನಾ, ಅನುಷಾ ಕೃಷ್ಣ, ಚಂದನ ಅನಂತ ಕೃಷ್ಣ, ವಿದ್ಯಾ ಮೂರ್ತಿ ಹಾಗೂ ಹಲವರು ತಾರಾ ಬಳಗದಲ್ಲಿದ್ದಾರೆ ಎಂದರು.
ಒಟ್ಟೂ 5 ಹಾಡಿದ್ದು, ಈಗಾಗಲೆ ಎರಡು ಹಾಡನ್ನು ಬಿಡುಗಡೆ ಮಾಡಲಾಗಿದೆ. ಉಳಿದ ಮೂರನ್ನು ಸಿನಿಮಾದಲ್ಲೇ ಕೇಳಬೇಕು ಎಂದ ಅವರು, ರೋಮ್ಯಾಂಟಿಕ್ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದೆ. ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಸುಂದರ ಪ್ರೇಮ ಕಥೆ ಪ್ರತಿಯೊಬ್ಬರಿಗೂ ಆಪ್ತವೆನಿಸುವ ರೀತಿಯಲ್ಲಿ ಮೂಡಿಬಂದಿದೆ ಎಂದರು.
ಬ್ಲಿಂಕ್ ನಿರ್ಮಾಪಕ ರವಿಚಂದ್ರ ಭಾವ ತೀರ ಯಾನ ಸಿನಿಮಾವನ್ನು ರಾಜ್ಯದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯವನ್ನು ಶಿವಮೊಗ್ಗ ಸಿನಿಮಾಸ್ ಅಡ್ಡ ಸಂಸ್ಥೆ ನಿರ್ವಹಿಸುತ್ತಿದ್ದಾರೆ ಎಂದರು. ನಾಯಕಿಯರಾದ ಶಿವಮೊಗ್ಗದ ಅನುಷಾ ಕೃಷ್ಣ ಮತ್ತು ಆರೋಹಿ ನೈನಾ , ನಿರ್ದೇಶಕರಾದ ಶೈಲೇಶ್ ಅಂಬೇಕಲ್ಲು, ತೇಜಸ್ ಕಿರಣ್ ಉಪಸ್ಥಿತರಿದ್ದರು.