ನವದೆಹಲಿ,ಅ.17 :ಇನ್ನು ಮುಂದೆ 4 ತಿಂಗಳು ಮುಂಚಿತವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಭಾರತೀಯ ರೈಲ್ವೇ ಬುಕ್ಕಿಂಗ್‌ಗಾಗಿ ಮುಂಗಡ ಕಾಯ್ದಿರಿಸುವಿಕೆಯ ಅವಯನ್ನು 120 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಿದೆ.
ಹೊಸ ಬದಲಾವಣೆ ನ.1 ರಿಂದ ಜಾರಿಯಾಗಲಿದೆ. ಅಕ್ಟೋಬರ್ 31 ರ ಮೊದಲು 120 ದಿನಗಳ ಬುಕ್ಕಿಂಗ್ ಮಾನ್ಯವಾಗಿರುತ್ತದೆ ಎಂದು ರೈಲ್ವೇ ಸ್ಪಷ್ಟಪಡಿಸಿದೆ.
ಅಕೃತ ಸೂಚನೆಯ ಪ್ರಕಾರ, ಪರಿಷ್ಕೃತ ಬದಲಾವಣೆಗಳು ವಿಭಿನ್ನ ಮುಂಗಡ ಕಾಯ್ದಿರಿಸು ವಿಕೆಯ ಮಿತಿಗಳನ್ನು ಹೊಂದಿರುವ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್‌ನಂತಹ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಅನ್ವಯಿಸುವುದಿಲ್ಲ.