ಶಿವಮೊಗ್ಗ,ಅ.04 :ತೀರ್ಥಹಳ್ಳಿ ತಾಲೂಕಿನ ಮುಡಬೂರು ಬಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಸಲಗವನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಕ್ರೆಬೈಲಿನ ನಾಲ್ಕು ಆನೆಗಳು, ದುಬಾರೆ ಬಿಡಾರದ ಮೂರು ಸಾಕಾನೆಗಳ ನೆರವಿನಿಂದ ಹಾಗೂ ಪಶು ವೈದ್ಯರ ಮತ್ತು ಮಾವುತರು ಕಾವಾಡಿಗರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ನೆರವಿನ ಹಸ್ತದೊಂದಿಗೆ ಈ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
ಸೆರೆಹಿಡಿದ ಕಾಡಾನೆ ಅಂದಾಜು 30 ವರ್ಷದ ಪ್ರಯದಾಗಿದ್ದು, ಈ ಆನೆಯನ್ನು ಸಕ್ರೆಬೈಲಿಗೆ ಕರೆತಂದು ಕ್ರಾಲ್‌ನಲ್ಲಿ ಇಡಲಾಗಿದೆ.ಕಾರ್ಯಾಚರಣೆಯಲ್ಲಿ ಸಕ್ರೆಬೈಲಿನ ಬಹದ್ದೂರ್, ಸಾಗರ್, ಬಾಲಣ್ಣ ಮತ್ತು ಜೂನಿಯರ್ ಅರ್ಜುನ, ದುಬಾರೆಯ ಮಾರ್ತಾಂಡಯ್ಯ, ಹರ್ಷ, ಅಜೇಯ ಆನೆಗಳು ಪಾಲ್ಗೊಂಡಿದ್ದವು.