ಬಲೆಗೆ ಸಿಲುಕಿ ಸಂಕಷ್ಟದಲ್ಲಿದ್ದ ನಾಗರಹಾವಿನ ಸಂರಕ್ಷಣೆ

Kranti Deepa

ಶಿವಮೊಗ್ಗ, ಫೆ. 7: ಮನೆ ಮುಂಭಾಗದ ಹೂವಿನ ಗಿಡಗಳ ಬೇಲಿಗೆ ರಕ್ಷಣೆಗೆಂದು ಹಾಕಿದ್ದ ಮೀನಿನ ಬಲೆಗೆ ನಾಗರಹಾವೊಂದು ಸಿಲುಕಿ ಬಿದ್ದ ಘಟನೆ, ಫೆ. 7 ರಂದು ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ. ನಾಗೇಂದ್ರ ಎಂಬುವರ ಮನೆಯ ಬಳಿ ಘಟನೆ ನಡೆದಿದೆ.

ಹೂವಿನ ಗಿಡಗಳ ರಕ್ಷಣೆಗೆಂದು ಬೇಲಿಯ ಸುತ್ತಲೂ ಬಲೆ ಹಾಕಲಾಗಿತ್ತು. ಆಕಸ್ಮಿಕವಾಗಿ ಸದರಿ ಬಲೆಗೆ ಬೃಹದಾಕಾರದ ನಾಗರಹಾವು ಹಾವು ಸಿಲುಕಿ ಬಿದ್ದಿದೆ.

ಬಲೆಯಲ್ಲಿ ಹಾವು ಸಿಲುಕಿ ಬಿದ್ದು ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಕುಟುಂಬದವರು, ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ‘ಕತ್ತರಿಯ ಸಹಾಯದಿಂದ ಬಲೆ ಕತ್ತರಿಸಿ, ಸುಮಾರು 4 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
";