ತೀರ್ಥಹಳ್ಳಿ, ಜು.23 : ಬಸ್ ಸ್ಟಾಂಡ್ ಸುತ್ತಮುತ್ತ ಕದ್ದು ಕುಳಿತ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕುಳಿತು ಪ್ರೇಮ ಸಲ್ಲಾಪ, ಚಾಟಿಂಗ್ , ಹರಟೆ ಹೊಡೆದು ಕಾಲ ಕಳೆದು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳನ್ನು ಸ್ವತಃ ಪ್ರಾಚಾರ್ಯರೇ ಹಿಡಿದು ಕಾಲೇಜಿಗೆ ಕರೆದೊಯ್ದ ಘಟನೆ ತೀರ್ಥಹಳ್ಳಿಯಲ್ಲಿ ಸಂಭವಿಸಿದೆ. ಪ್ರಾಚಾರ್ಯೆಯ ಕೆಲಸಕ್ಕೆ ಅಪಾ್ರ ಪ್ರಶಂಸೆ ವ್ಯಕ್ತವಾಗಿದೆ. ಪ್ರಾಚಾರ್ಯರೆಂದರೆ ಹೀಗಿರಬೇಕೆಂದು ಕೆಲವು ಪಾಲಕರೇ ಹೇಳಿದ್ದಾರೆ.
ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ ಅಥವಾ ಕಾಲೇಜಿಗೆ ಹಾಜರಾಗದೆ ಬಸ್ ನಿಲ್ದಾಣದಲ್ಲಿ ಹಾಗೂ ಎಲ್ಲೆಂದರಲ್ಲಿ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿರುವುದು ಎಲ್ಲ ಊರಿನ ಕಥೆ. ಆದರೆ ತೀರ್ಥಹಳ್ಳಿಯಲ್ಲಿ ಇಂತಹ ಮಕ್ಕಳನ್ನು ಸರಿದಾರಿಗೆ ಕರೆತರುವ ಪ್ರಯತ್ನ ಬುಧವಾರ ನಡೆದಿದೆ.
ಬಸ್ ಸ್ಟಾಂಡ್, ಪಾರ್ಕ್, ಮಾಲ್ ಬೇಕರಿ, ಕೆಫೆಗಳಲ್ಲಿ ದಿನವಿಡೀ ಕಳೆಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮನೆಯಲ್ಲಿ ಕಾಲೇಜಿಗೆ ಬರುವುದಾಗಿ ಹೇಳಿ ಕಾಲೇಜಿಗೆ ಹೋಗದೆ ಇರುವ ಬಗ್ಗೆ ಪ್ರತಿ ದಿನ ದೂರು ಬರುತ್ತಿದ್ದವು. ಮೊಬೈಲ್ ಲಲ್ಲಿ ಗೇಮ್, ರೀಲ್ಸ್ ಹುಚ್ಚಿಗೆ ಕಾಲೇಜಿಗೆ ಹೋಗದೆ ಬಸ್ ಸ್ಟಾಂಡ್ ಬಳಿ ಸಂಜೆವರೆಗೆ ಕುಳಿತು ಮನೆಗೆ ಹೋಗುವವರೂ ಇದ್ದರು.. ಈ ಬಗ್ಗೆ ಅನೇಕರು ಪೊಲೀಸ್
ಇಲಾಖೆಗೂ ದೂರು ನೀಡಿದ್ದರು.