ಪಾಲಿಕೆ-ಗ್ರಾಪಂ.ಜಗಳದಲ್ಲಿ ಬಡವಾದ ಪತ್ರಕರ್ತರ ಬಡಾವಣೆ

Kranti Deepa

ಶಿವಮೊಗ್ಗ,ನ.27 :  ಅಪ್ಪ- ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ನಗರ ಪಾಲಿಕೆ ಮತ್ತು ಗ್ರಾಪಂಗೆ ಅರೆಬರೆ ಸೇರಿರುವುದರಿಂದ ನಗರದ ಸೋಮಿನ ಕೊಪ್ಪ ರಸ್ತೆಯ ಪತ್ರಕರ್ತರ ಬಡಾವಣೆಯು ಯಾವ ಸೌಲಭ್ಯವೂ ಇಲ್ಲದೆ ವಂಚಿತವಾಗಿದೆ. ಇಲ್ಲಿ ವಸತಿ ಮಾಡಿರುವ ಜನರು ಮೂಲ ಸೌಕರ್ಯವಿಲ್ಲದೆ ಬಳಲುತ್ತಿದ್ದಾರೆ.

ಶಿವಮೊಗ್ಗ ನಗರ ಅತಿವೇಗದಲ್ಲಿ  ಅಭಿವೃದ್ಧ್ಧಿ ಹೊಂದುತ್ತಿರುವ ನಗರವಾಗಿದೆ. ನಗರದ ಹೊರಭಾಗದಲ್ಲಿ ಸಾಕಷ್ಟು ಬಡಾವಣೆಗಳು ತಲೆಎತ್ತುತ್ತಿವೆ. ಆದರೆ ಪಾಲಿಕೆ ವ್ಯಾಪ್ತಿ ಇನ್ನೂ ವಿಸ್ತರಣೆ ಆಗದಿರುವ ಕಾರಣ  ಅತ್ತ  ಅಬ್ಬಲಗೆರೆ ಗ್ರಾಪಂನವರೂ ಇಲ್ಲಿಗೆ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕುತ್ತಿದ್ದಾರೆ. ಪಾಲಿಕೆಯಿಂದಲೂ ಸೌಲಭ್ಯ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಪತ್ರಕರ್ತರ ಕಾಲೋನಿ ಇದೆ.

ಸುಮಾರು ೪೦೦ರಷ್ಟು ನಿವೇಶನಗಳು ಇಲ್ಲಿವೆ. ಇದರಲ್ಲಿ ೫೦ರಷ್ಟು ನಿವೇಶನದಲ್ಲಿ ಮಾತ್ರ ಮನೆಗಳು ತಲೆಎತ್ತಿವೆ. ಇದರಿಂದಾಗಿ ಪಾಲಿಕೆ ಮತ್ತು ಗ್ರಾಪಂ ಯಾವ ಸೌಕರ್ಯವನ್ನೂ ಕಲ್ಪಿಸಲು ಮುಂದಾ ಗುತ್ತಿಲ್ಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳೆಲ್ಲ ಹಾಳುಬಿದ್ದಿವೆ. ಚರಂಡಿಗಳೇ ಇಲ್ಲ. ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ. ಖಾಲಿ ನಿವೇಶನಗಳೆಲ್ಲ ಹಾಳು ಬಿದ್ದಿದ್ದು, ಗಿಡಗಂಟಿ ಗಳು ಬೆಳೆದು ಕಾಡು ಪ್ರಾಣಿಗಳು ಬರುವಂತಾಗಿದೆ.  ಬೀದಿದೀಪವಿಲ್ಲ. ಕಸದ ರಾಶಿಗಳು ಹಾಗೆಯೇ ಬಿದ್ದಿದೆ. ನಗರ ಪಾಲಿ ಕೆ ಪೌರಕಾರ್ಮಿಕರು ಕಸ ತೆಗೆಯಲು ಬರುತ್ತಿಲ್ಲ. ಗ್ರಾಪಂನವರ ವಾರಕ್ಕೊಮ್ಮೆ ಕಸವನ್ನು ಸಾಗಿಸುತ್ತಿದ್ದಾರೆ. ಆದರೆ ಪಾಲಿಕೆಯವರು ಈ ಕಡೆ ತಲೆಯನ್ನು ಹಾಕುತ್ತಿಲ್ಲ ಎಂಬ ಆರೋಪ ಇದೆ.

ಇದರಿಂದ ಈ  ಬಡಾವಣೆ ಪಾಳು ಬಿದ್ದಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಗ್ರಾಪಂನಿಂದ ಸದ್ಯಕ್ಕೆ ನೀರು ಬರುತ್ತಿದೆ.  ನಗರ ಪಾಲಿಕೆಯವರು ನೀರಿನ ಟ್ಯಾಂಕ್ ನಿರ್ಮಿಸಿ ದ್ದರಾದರೂ  ಅದಕ್ಕೆ ನೀರು ಸಾಗಿಸುವ ಪೈಪ್‌ಗಳನ್ನೆಲ್ಲ ಕಳ್ಳರು ಹೊತ್ತೊಯ್ದಿದ್ದಾರೆ. ಇದರಿಂದ ನೀರು ಪೂರೈಕೆ ಇಲ್ಲವಾಗಿದೆ. ನಿರ್ಜನ ಪ್ರದೇಶ ವಾಗಿರುವ  ಕಾರಣ ಈ ಪ್ರದೇಶ ಯಾರಿಗೂ ಬೇಡವಾಗಿದೆ. ನಗರಪಾಲಿಕೆಯ ಭಾಗ  ವಿಸ್ತರಣೆ ಯಾದರೆ ಸಕಲ ಸೌಲಭ್ಯವೂ ಸಿಗಲಿದೆ. ಜನರೂ  ಮನೆ ಕಟ್ಟಲು ಮುಂದಾಗುತ್ತಾರೆ. ಆದ್ದರಿಂದ ಸರಕಾರ ಸೂಚಿಸಿದಂತೆ ಬೇಗ ಪಾಲಿಕೆ ತನ್ನ ಹೊರಭಾಗದ ಪ್ರದೇಶಗಳ ಸಮೀಕ್ಷೆ ನಡೆಸಿ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕೆಂದು ಅಲ್ಲಿನ ನಿವಾಸಿ ಗಳು ಆಗ್ರಹಿಸುತ್ತಾರೆ. ಅನೇಕ ಸಮಸ್ಯೆಗಳಿಂದ ಬಡಾವಣೆ ಬಳಲುತ್ತಿದೆ. ಇದಕ್ಕೆ ಮುಕ್ತಿ ಕೊಡಲು ಗ್ರಾಪಂನಿಂದ ಸಾಧ್ಯ ವಿಲ್ಲ  ಎನ್ನುವುದು ನಿವಾಸಿಗಳ ಮಾತು. ಪಾಲಿಕೆ ಮತ್ತು ಜನಪ್ರತಿನಿಗಳು  ಈ ಬಡಾವಣೆಯ  ಸಮಗ್ರ ಬೆಳವಣಿಗೆಗೆ ಮುಂದಾಗ ಬೇಕೆನ್ನುವುದು ಅಲ್ಲಿನ ನಿವಾಸಿಗಳು ಕೂಗು.

ತ್ರಿಶಂಕು ಸ್ಥಿತಿಯಲ್ಲಿರುವ ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕಾದದ್ದು ಸ್ಥಳೀಯ ಸಂಸ್ಥೆಯ ಆಡಳಿತ ಮಂಡಳಿಯ ಆದ್ಯ ಕರ್ತವ್ಯ ಆದರೆ ಅಬ್ಬಲಗೆರೆ ಗ್ರಾಪಂ ಆಗಲಿ, ಮಹಾನಗರ ಪಾಲಿಕೆಯಾಗಲಿ ಎರಡು ಕೂಡ ಈ ಬಗ್ಗೆ ಗಮನಹರಿಸದಿರುವುದು ನಮ್ಮ ದುರ್ದೈವ. ನಾವು ಸಹ ಎಲ್ಲರಂತೆ ತೆರಿಗೆ ಪಾವತಿಸುತ್ತೇವೆ ಆದರೆ ಸೌಲಭ್ಯ ಮಾತ್ರ ಇಲ್ಲವಾಗಿದೆ.ಈ ರೀತಿ ಆದರೆ ನಾವು ಜೀವನ ನಡೆಸುವುದಾದರೂ ಹೇಗೆ ? ನಮಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲೇಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಕಾರಿಗಳ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ.
-ಬಡಾವಣೆಯ ನಿವಾಸಿಗಳು

Share This Article
";