ಪೊಲೀಸರಿಗೆ ತನ್ನ ವಿರುದ್ಧ ದೂರು‌ನೀಡಿದ್ದಕ್ಕೆ ಪತ್ನಿಗೆ ಇರಿದ ಪತಿರಾಯ

Kranti Deepa

ಶಿವಮೊಗ್ಗ, ಮೇ.08 : ಪತಿಯ ಹಿಂಸೆಯ ವಿರುದ್ಧ ಮಹಿಳಾ ಠಾಣೆಗೆ ತನ್ನ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ನಗರದ ಹೊಸಮನೆಯಲ್ಲಿ ಸಂಭವಿಸಿದೆ. ಪ್ರೀತಿಸಿ ಮದುವೆಯಾಗಿದ್ದ ವಿನಯ್ ಕುಮಾರ್ ಪತ್ನಿ ಪದ್ಮಾವತಿಗೆ ಚಾಕುವಿನಿಂದ ಇರಿದು ಕೊಲೆಯ ಯತ್ನ ನಡೆಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಪತ್ನಿ ಮೆಗ್ಗಾನ್‌ನಲ್ಲಿ ಚಿಕಿತ್ಸೆಯಲ್ಲಿದ್ದು, ಚೇತರಿಕೆಯಲ್ಲಿದ್ದಾಳೆ. ಈ ಜೋಡಿ ಹೊಸಮನೆ ಎರಡನೇ ತಿರುವಿನಲ್ಲಿ ವಾಸವಾಗಿದ್ದು, 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ವಿನಯ್ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಇವರಿಗೆ 9  ವರ್ಷದ ಗಂಡು ಮಗನಿದ್ದಾನೆ.. ಪದ್ಮಾವತಿಯು ಅನ್ನಪೂರ್ಣ ಪಿಜಿ ನಡೆಸುತ್ತಿದ್ದರು.

ಕಳೆದ ಎರಡು ವರ್ಷದಿಂದ ಪತಿ ಪತ್ನಿಯರ ನಡುವೆ ವೈಮನಸ್ಸು ಆರಂಭವಾಗಿತ್ತು ಎಂದು ಗೊತ್ತಾಗಿದೆ.ನಿನ್ನೆ ಇದು ಜೋರಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಪತ್ನಿ ದೂರು ನೀಡಿರುವುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪತಿ ಮಲಗಿದ್ದ ಕೋಣೆಗೆ ಬಂದು ರಾತ್ರಿ 1 ಗಂಟೆಗೆ ಪತ್ನಿಯ ಕುತ್ತಿಗೆಗೆ ಕೈಹಾಕಿದ್ದ ವಿನಯ್ ಕುಮಾರ್ ಕುತ್ತಿಗೆ ಹಿಸುಕಲು ಯತ್ನಿಸಿದ್ದ. ಆಗ ಅವಳು ಕಿರುಚಿಕೊಂಡಿದ್ದರು. ನಂತರ ಪತ್ನಿ ಅತ್ತೆ ರೂಂಗೆ ಬಂದು ಮಲಗಿದ್ದರು. ಅಲ್ಲಿಗೆ ಚಾಕು ಹಿಡಿದುಕೊಂಡು ಬಂದ ವಿನಯ್ ಪತ್ನಿಯ ಪಕ್ಕೆಗೆ ಇರಿದಿದ್ದಾನೆ. ನಂತರ ಸ್ನೇಹಿತೆಗೆ ಹಾಗೂ 112 ಗೆ ಕರೆ ಮಾಡಿ ಪದ್ಮಾವತಿ ಗಂಡನ ಸಾವಿನ ಅಂಗಳದಿಂದ ಬಜಾವ್ ಆಗಿದ್ದಾರೆ. 

Share This Article
";