ವರದಿ: ಸನತ್
ಶಿವಮೊಗ್ಗ ಬಸ್ ನಿಲ್ದಾಣ ಹಗಲಿನಲ್ಲಿ ಒಂದು ರೀತಿಯಲ್ಲಿ ಇದ್ದರೆ ರಾತ್ರಿಯ ಸಮಯದಲ್ಲಿ ಬೇರೆಯೆ ಇರುತ್ತದೆ.ಕ್ಷಣ ಕ್ಷಣಕ್ಕೂ ಬಯದ ವಾತವರಣ ಸೃಷ್ಠಿಯಾಗಿದೆ. ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಪುಂಡರದ್ದೆ ಕಾರು ಬಾರು ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಮಲೆನಾಡಿನ ಅನೇಕ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕೊಂಡಿಯಾಗಿರುವ ಶಿವಮೊಗ್ಗ ನಗರದ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಈ ರೀತಿಯಾಗುತ್ತಿರುವದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದ್ದು ಈ ಬಗ್ಗೆ ರಕ್ಷಣಾ ಇಲಾಖೆಯವರು ಗಮನ ಹರಿಸಬೇಕಾಗಿದೆ.
ಸಹಜವಾಗಿ ರಾತ್ರಿ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ತಮ್ಮ ಸ್ವಂತ ದುಡಿಮೆಗಾಗಿ ಟೀ ಕಾಫಿ ಮಾರುವವರು,ಇಡ್ಲಿ ಗಾಡಿ ಇಟ್ಟುಕೊಂಡವರು , ವಿವಿಧ ಬಗೆಯ ಆಹಾರ ಪದಾಧರ್ಥಗಳನ್ನ ಮಾರುವವರ ಮೇಲೆ ಈ ಪುಂಡರ ತಂಡ ದಾಳಿ ಮಾಡುತ್ತದೆ.ಈವರ ಹ- ವಸೂಲಿ ಮಾಡುತ್ತದೆ ಎಂಬ ಆರೋಪ ಸಹ ಕೇಳಿ ಬರುತ್ತದೆ.
ಗಾಂಜಾ ಸೇವನೆ ಮಾಡಿದವರು , ಪಾನ ಮತ್ತರು ಹಾಗೂ ಇನ್ನಿತರರು ಇವರೊಂದಿಗೆ ಸೇರಿಕೊಂಡು ಮತ್ತಷ್ಟು ಬಯದ ವಾತವಾರಣವನ್ನ ಸೃಷ್ಟಿಸುತ್ತಿದ್ದಾರೆ. ಇದ್ದೆಲದರ ನೇರ ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ಸಜ್ಜನ ನಾಗರೀಕರ ಮೇಲೆ ಆಗುತ್ತಿರುವುದು ಶಿವಮೊಗ್ಗ ನಗರಕ್ಕೆ ಒಂದು ಕಪ್ಪು ಚುಕ್ಕೆಯಾದಂತಾಗಿದೆ ಎಂಬ ಅಭಿಪ್ರಾಯ ನಾಗರೀಕ ವಲಯದಲ್ಲಿ ಕೇಳಿ ಬರುತ್ತಿದೆ.
ರಾತ್ರಿ ವೇಳೆ ಶಿವಮೊಗ್ಗ ನಗರದ ಎಲ್ಲಾ ಸಣ್ಣ,ಪುಟ್ಟ , ದೊಡ್ಡ ವಾಣಿಜ್ಯ ಕೇಂದ್ರಗಳು ಬಂದ್ ಆಗಿರುತ್ತವೆ . ಆದರೆ ಸಣ್ಣ ಪುಟ್ಟ ವಸ್ತುಗಳು ಹಾಗೂ ದೈನಂದಿನ ಬದುಕಿನ ಅಗತ್ಯ ವಸ್ತುಗಳು ಬಸ್ಟ್ಯಾಂಡ್ ನಲ್ಲಿ ರಾತ್ರಿ ವೇಳೆ ಲಭ್ಯವಿರುತ್ತದೆ. ಆದರೆ ಪುಂಡರ ಹಾವಳಿಯಿದಾಗಿ ಇವರುಗಳ ವ್ಯಾಪಾರ ವಹಿವಾಟುಗೂ ಕಲ್ಲು ಬಿದ್ದಂತಾಗಿದೆ.
ಬಸ್ ನಿಲ್ದಾಣದ ಪಕ್ಕದಲ್ಲಿಯೇ ವಿವಿಧ ಪೋಲಿಸ್ ಠಾಣೆಗಳು ಸಾಲಾಗಿ ಇದ್ದರು ಇದರ ಪರಿಣಾಮ ಈ ಪುಂಡರ ಬಿದ್ದಿಲ್ಲ ಇದರಿಂದಾಗಿಯೇ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತಾಗಿದೆ.
ಬೇರೆ ಬೇರೆ ಊರುಗಳಿಂದ ತಡ ರಾತ್ರಿ ಬಂದು ಇಳಿಯುವ ಮಹಿಳೆಯರು, ಮಕ್ಕಳು ಇಲ್ಲಿ ಒಡಾಡಲು ಭಯ ಪಡುತ್ತಿದ್ದಾರೆ. ಸಾರ್ವಜನಿಕರ ಹಿತಕಾಯಬೇಕಿದ್ದ ರಕ್ಷಣಾ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ಆಕ್ರೋಶ.ಒಟ್ಟಾರೆಯಾಗಿ ಶಿವಮೊಗ ಬಸ್ ನಿಲ್ದಾಣ ಪುಂಡರ ಹಾವಳಿ ಇಂದ ರಕ್ಷಸಿ ಪ್ರಯಾಣಿಕರ ಅನುಕೂಲ ಕಲ್ಪಿಸಬೇಕಾಗಿದೆ.
ಇನ್ನು ಶೌಚಾಲಯದ ಸಮಸ್ಯೆ ಕೇಳುವವರ್‍ಯಾರು?
ನಗರದ ಪ್ರೈವೆಟ್ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಒಳಗಿರುವ ಶೌಚಾಲಯಗಳು ದುಸ್ತಿಯಲ್ಲಿದ್ದು ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಳಸಲು ಯೋಗ್ಯವಾಗಿಲ್ಲ.ಆದರ ಒಳಗೆ ಹೋದರೆ ಒಂದೇ ಮೂರ್ಚೇ ಹೋಗುತ್ತಾರೆ ಇಲ್ಲವೇ ವಾಂತಿ ಮಾಡಿಕೊಂಡು ಹೊರಬರುತ್ತಾರೆ.ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಶೌಚಾಲಯದ ಒಳಹೋಗಿ ನಿತ್ಯಕರ್ಮ ಮುಗಿಸಿಕೊಂಡು ಬರುವುದು ಮಹಿಳೆಯರಿಗಂತೂ ದೊಡ್ಡ ಸವಾಲಾಗಿದೆ .ಹಣ ನೀಡಿ ಮಲ-ಮೂತ್ರ ಮಾಡಲಾಗದ ದುಃಸ್ಥಿತಿ ಒಂದೆಡೆ. ಇನ್ನೊಂದೆಡೆ ಶೌಚಾಲಯಗಳು ಒಳಗೆ ಹೋಗದಂತಹ ಸ್ಥಿತಿ. ಇದು ಹೀಗೆ ಮುಂದುವರೆದರೇ ಸ್ವಚ್ಛ ಭಾರತದ ಕನಸು ನನಸಾಗಲು ಹೇಗೆ ಸಾಧ್ಯ?
ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೆಚ್ಚಾದ ಕಳ್ಳತನ
ಇನ್ನು ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಲೆ ಇರುತ್ತವೆ ಆದರೆ ಇದಕ್ಕೆ ಕಡಿವಾಣ ಮಾತ್ರ ಬಿಳುತ್ತಿಲ್ಲ .ಪ್ರಯಾಣಿಕರು ಸ್ವಲ್ಪ ನಿರ್ಲಕ್ಷ್ಯ ತೋರಿದರು ತಮ್ಮ ಹಣ ,ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡು ಹೋಗುತ್ತಾರೆ.ಇದರ ಬಗ್ಗೆ ಶಿವಮೊಗ್ಗ ಪೋಲಿಸ್ ಇಲಾಖೆ ಗಮನಹರಿಸಬೇಕಾಗಿದೆ.