ಹಾಸನ,ಡಿ.08 :ಇಲ್ಲಿನ ಎಲ್.ವಿ. ಪಾಲಿಟೆಕ್ನಿಕ್‌ನ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದ ಪಿಡಿಒ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬು ತೋಳಿನ ಅಂಗಿ ತೊಟ್ಟು ಹಾಜ ರಾದ ಅಭ್ಯರ್ಥಿಗಳ, ಅಂಗಿಯ ತೋಳು ಗಳನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ಕತ್ತರಿಸಿ ದರು. ಇದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು.
ಪರೀಕ್ಷೆ ಬರೆಯಲು ನೂರಾರು ಯುವಕ-ಯುವತಿಯರು ಬಂದಿದ್ದರು. ಕೆಲ ಯುವತಿಯರು ತುಂಬು ತೋಳಿನ ಬಟ್ಟೆ ಧರಿಸಿದ್ದರು. ಇದರಿಂದ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳನ್ನು ಬಿಡಲು ಅಕಾರಿಗಳು ನಿರಾಕರಿಸಿದರು. ಪರೀಕ್ಷೆಗೆ ಸಮಯವಾಗುತ್ತಿದೆ, ಒಳಗೆ ಬಿಡಿ ಎಂದು ಪರೀಕ್ಷಾರ್ಥಿಗಳು ಕೋರಿದರೂ ಅವಕಾಶ ನೀಡಲಿಲ್ಲ. ಕೊನೆಗೆ ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಪ್ರವೇಶ ನೀಡಲಾಯಿತು. ಈ ವೇಳೆ ಅಕಾರಿಗಳು ಹಾಗೂ ಪರೀಕ್ಷಾರ್ಥಿ ಗಳ ನಡುವೆ ವಾಗ್ವಾದ ನಡೆಯಿತು.
ವಸ್ತ್ರಸಂಹಿತೆ ನಿಯಮವಿದೆ. ಪ್ರವೇಶಪತ್ರದಲ್ಲಿ ನಿಯಮಗಳನ್ನು ಹಾಕಲಾಗಿದೆ. ಆದರೆ, ನೀವು ನಿಯಮ ಗಳನ್ನು ಉಲ್ಲಂಘಿಸಿ ಬಂದಿದ್ದೀರಾ, ನಮ್ಮ ಕರ್ತವ್ಯ ನಾವು ಮಾಡಲೇಬೇಕು ಎಂದು ಅಕಾರಿ ಹೇಳಿದರು.
ಒಂದು ಇಂಚು ಉದ್ದವಿದೆ ಎಂಬ ಕಾರಣಕ್ಕೆ ಮಹಿಳಾ ಅಭ್ಯರ್ಥಿಗಳ ಬಟ್ಟೆಯನ್ನೂ ಕತ್ತರಿಸಿದ್ದಾರೆ. ಬೇರೆ ಊರುಗಳಿಂದ ಬಂದಿರುವ ಯುವತಿಯರು ಕತ್ತರಿಸಿದ ಬಟ್ಟೆ ಯಲ್ಲಿಯೇ ಮನೆಗೆ ಹೋಗಬೇಕಾಯಿತು. ಸರ್ಕಾರ ಇದ್ಯಾವ ನಿಯಮಾವಳಿ ಮಾಡುತ್ತಿದೆ’ ಎಂದು ಅಭ್ಯರ್ಥಿಯೊಬ್ಬರು ಪ್ರಶ್ನಿಸಿದರು.