ಶಿವಮೊಗ್ಗ, ಅ.27 :ನಗರಸಭೆ ಮಾಜಿ ಅಧ್ಯಕ್ಷ, ವೀರಶೈವ ಸಮಾಜದ ಮುಖಂಡ ಸುಭಾಶಣ್ಣ ಎಂದೆ ಹೆಸರಾಗಿದ್ದ ಎನ್.ಜೆ. ರಾಜಶೇಖರ್ (67 ) ಇಂದು ಸಂಜೆ ನಿಧನರಾದರು.
ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದರು.
ಎಲ್ಲರ ಒಡನಾಡಿಯಾಗಿದ್ದ ಇವರು ಬಿಜೆಪಿ ಮುಖಂಡರಾಗಿ ನಗರಸಭೆಯ ಸದಸ್ಯರಾಗಿ ಒಂದು ಬಾರಿ ನಗರಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೃತರು ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರಾಗಿಯೂ ವೀರಶೈವ ಕಲ್ಯಾಣ ಮಂದಿರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಇವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಇವರಿಗೆ ಕ್ರಾಂತಿದೀಪ ಅಕ್ಷರ ಕಂಬನಿ ಮಿಡಿದಿದೆ.