Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

ಶಿಕಾರಿಪುರ ತಾಲ್ಲೂಕು ಪ್ರೆಸ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಕೋಟೇಶ್ವರ ಅವಿರೋಧ ಆಯ್ಕೆ

ಶಿಕಾರಿಪುರ, ಜೂ.29 : ಪಟ್ಟಣದ ಸುದ್ದಿಮನೆಯಲ್ಲಿ 2026-2029 ರ ಮೂರು ವರ್ಷದ ಆಡಳಿತ ಮಂಡಳಿಗೆ ಮಾಜಿ ಅಧ್ಯಕ್ಷ ಈ ಹೆಚ್ ಬಸವರಾಜ್ ರವರ ರಾಜೀನಾಮೆಯಿಂದ ತೆರವುಗೊಂಡಿದ್ದರಿಂದ ರಾಘವೇಂದ್ರ ಹೆಚ್ ಆರ್ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲು ಟ್ರಸ್ಟಿ ಗಳ ಸಭೆ ಕರೆಯಲಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕೋಟೇಶ್ವರ ಉಪಾಧ್ಯಕ್ಷರಾಗಿ ಎಸ್ ಬಿ ಅರುಣ್ ಕುಮಾರ್ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪಟ್ಟಣದ ಸುದ್ದಿಮನೆಯಲ್ಲಿ ಶುಕ್ರವಾರ ಜಿಲ್ಲಾ ಉಪಾಧ್ಯಕ್ಷ ಹಾಗೂ ಟ್ರಸ್ಟಿ ಹುಚ್ಚರಾಯಪ್ಪ, ಮಾಜಿ ಟ್ರಸ್ಟ್ ಅಧ್ಯಕ್ಷರು ಗಳಾದ ಬಾಲಕೃಷ್ಣ ಜೋಯ್ಸ್, ಭೋಗಿ ರಾಜಪ್ಪ, ಟ್ರಸ್ಟಿ ಗಳಾದ ಶೇಷಗಿರಿ, ಚಂದ್ರಶೇಖರ್ ಮಠದ್, ಮಂಜುನಾಥ್ ಮಠದ್ ಅವರ ಚರ್ಚೆ, ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಗೆ ಮಾದರಿಯಾಗುವಂತೆ ಸತತವಾಗಿ ಇಲ್ಲಿಯವರೆಗೂ ಟ್ರಸ್ಟ ನ ಚುನಾವಣೆಯಾಗಲಿ ಹಾಗೆ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಮಾಡದೇ ಸದಸ್ಯರುಗಳ ಒಮ್ಮತದಿಂದ ಅವಿರೋಧವಾಗಿ ಅಧಿಕಾರಿ ಮಂಡಳಿಯ ಆಯ್ಕೆ ನಡೆದಿದ್ದು ತಾಲ್ಲೂಕಿನಲ್ಲಿ ಹತ್ತು ಹಲವಾರು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಂಘದಿಂದ ಜನೋಪಯೋಗಿ ಕಾರ್ಯಕ್ರಮ ನಡೆಸುತ್ತಿರುವುದು ಮತ್ತೊಮ್ಮೆ ಜಿಲ್ಲೆಗೆ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಹಾರೈಸಲಾಯಿತು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್, ಉಪಾಧ್ಯಕ್ಷರಾದ ಹೆಚ್.ಕೆ.ಪ್ರಕಾಶ್, ಹೆಚ್.ಎಸ್.ರಘು, ಜಿಲ್ಲಾ ನಿರ್ದೇಶಕ ರಾಜರಾವ್ ಜಾಧವ್,  ಐ ಎಫ್ ಮಳಿಗಿ, ನರಸಿಂಹ ಸ್ವಾಮಿ,ಅನಂತ್, ಹಾಗೂ ಕಾಳಿಂಗರಾವ್ ಸೇರಿದಂತೆ ಇತರರಿದ್ದರು.

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST