ಎನ್ಇಎಸ್: ಕೋಣಂದೂರು ಪಿಯು ಕಾಲೇಜು 100% ಫಲಿತಾಂಶ

Kranti Deepa
ಶಿವಮೊಗ್ಗ,ಏ.10 : ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪದವಿಪೂರ್ವ ಕಾಲೇಜುಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, ಕೋಣಂದೂರಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜು ವಾಣಿಜ್ಯ ಮತ್ತು ಕಲಾ‌ ವಿಭಾಗದಲ್ಲಿ ಹಾಗೂ ರಾಷ್ಟ್ರೀಯ ಸ್ವಾತಂತ್ರ ಪದವಿಪೂರ್ವ ವಸತಿ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ.100% ಫಲಿತಾಂಶ ಪಡೆದಿದ್ದಾರೆ.
ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು (ಶೇ.85.73), ಹೆಚ್.ಎಸ್.ರುದ್ರಪ್ಪ ಪಿಯು ಕಾಲೇಜು (ಶೇ.70) ಫಲಿತಾಂಶ ಪಡೆದಿದೆ. ಕಲೆ‌ ಮತ್ತು ವಾಣಿಜ್ಯ ವಿಭಾಗದಲ್ಲಿ ಬಿಆರ್.ಪಿ ರಾಷ್ಟ್ರೀಯ ಪದವಿಪೂರ್ವ ಕಾಲೇಜು (ಶೇ.78.69%), ಜೆ.ಪಿ.ಎನ್ ಪಿಯು ಕಾಲೇಜು (ಶೇ.62.5), ತೀರ್ಥಲಿಂಗೇಶ್ವರ ಪಿಯು ಕಾಲೇಜು ಬೆಳಗುತ್ತಿ (ಶೇ.75) ಫಲಿತಾಂಶ ಪಡೆದಿದೆ. ಸಾಧಕ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

Share This Article
";