ಶಿವಮೊಗ್ಗ,ನ.20 : ನಗರದ ಗಾರ್ಡನ್ ಏರೊಯಾದ ವಸತಿಗೃಹ ತಂಗಿದ್ದ ಮೈಸೂರುನ ವಾಸಿ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರಿನಿಂದ ಬಂದಿದ್ದ ರವಿ ಕುಮಾರ್ ಗೌಡ (50) ಎಂಬುವರು ಕಿಟಕಿಗೆ ನೇಣಿನ ಹಗ್ಗ ಬಿಗಿದುಕೊಂಡು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾಲಕೊಟ್ಟವನ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಲಾಡ್ಜ್ ಸಿಬ್ಬಂದಿಗಳು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಮೈಸೂರಿಗೆ ಶವ ಕಳುಹಿಸಲಾಗಿದೆ.
ಡೆತ್ ನೋಟ್ ಬರೆದ ಕಾರಣ ಈ ಪ್ರಕರಣ ದೊಡ್ಡ ಪೇಟೆಯಲ್ಲಿ ಎಫ್ಐಆರ್ ಆಗಿದೆ.