ಶಿವಮೊಗ್ಗ, ಆ.23 : ಕರ್ನಾಟಕ ರಾಜ್ಯ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಪಿ.ಎ ಎಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಮೈಸೂರಿನ ವ್ಯಕ್ತಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಮಕೃಷ್ಣ ನಗರದ ವಾಸಿ ರಘುನಾಥ ಎಸ್.ವಿ.ಎನ್ (36 ) ಬಂಧಿತ ವ್ಯಕ್ತಿ. ಈ ಬಗ್ಗೆ ಜಿಲ್ಲಾ ಯುವ ಕಾಂಗ್ರೆಸ್ ಉತ್ತರ ಬ್ಲಾಕ್ ಅಧ್ಯಕ್ಷ ಗಿರೀಶ ಆರ್. ಆ. 22 ರಂದು ದೂರು ನೀಡಿದ್ದರು. 6 ತಿಂಗಳಿಂದ ರಘುನಾಥ ಎನ್ನುವವನು ಸಚಿವರ ಹೆಸರು ಹೇಳಿ ಮೋಸ ಮಾಡುತ್ತಿರುವುದನ್ನು ವಿವರಿಸಿದ್ದರು.
ಈ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ 77-2025 ಕಲಂ : 318 (4 ), 319 (2 ) ಬಿ,ಎನ್,ಎಸ್ -2023 ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವ ಬಗ್ಗೆ ಎಸ್ ಪಿ ಮಿಥುನ್‌ಕುಮಾರ್ ಜಯನಗರ ಇನ್‌ಸ್ಪೆಕ್ಟರ್ ಸಿದ್ದೆಗೌಡ ಹೆಚ್.ಎಮ್, ಪಿ.ಎಸ್.ಐ-2 ಕೋಮಲಾ ಎಎಸ್‌ಐ ಕರಿಬಸಪ್ಪ ಹಾಗೂ ಸಿಬ್ಬಂದಿಯವರಾದ ನಾಗರಾಜ,ಕೆ, ವಸಂತ,ಜಿ, ಸಚಿನ್, ವೀರೇಶ್ ಒಳಗೊಂಡ ತಂಡ ರಚಿಸಿದ್ದರು.ತಂಡವು ಆ. 22 ರಂದು ಆರೋಪಿಯನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾರುಪಡಿಸಿದೆ.