ಶಿವಮೊಗ್ಗ,ಡಿ.12 : ಖೇಲೋ ಇಂಡಿಯಾ ಯೋಜನೆ ಯಡಿ ಅಂತರರಾಷ್ಟ್ರೀಯ ಗುಣಮಟ್ಟದ ೨೦೦ ಮೀಟರ್ ಸಿಂಥೆಟಿಕ್ ಸ್ಕೇಟಿಂಗ್ ರಿಂಕ್ ಮಂಜೂರಾತಿಗೆ ಮತ್ತು ಅದರ ಜೊತೆಯಲ್ಲಿ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ವಿಸ್ತ ರಣೆಯಲ್ಲಿರುವ ಕ್ರೀಡಾ ಸಂಕೀರ್ಣದ ಅಸ್ತಿತ್ವದಲ್ಲಿರುವ ಟೆನಿಸ್ ಅಂಕಣಕ್ಕೆ ಮೇಲ್ಛಾವಣಿ ಮಾಡುವ ಕುರಿತು ಚರ್ಚಿಸಿ ಸೂಕ್ತ ಅನುದಾನವನ್ನು ಒದಗಿಸುವಂತೆ ಕೋರಿ ಸಂಸದ ಬಿ.ವೈ. ರಾಘವೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆಯವರನ್ನು ಭೇಟಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿದರು.
ಶಿವಮೊಗ್ಗದಲ್ಲಿ ಕ್ರೀಡಾ ಮೂಲಸೌಕ ರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಹಿಂದೆ ಖೇಲೋ ಇಂಡಿಯಾ ಯೋಜನೆ ಯಡಿ ರೂ 11.83 ಕೋಟಿ ಅನುದಾನ ವನ್ನು ಒದಗಿಸಲಾಗಿತ್ತಿತ್ತು. ಈ ಅನುದಾನ ವನ್ನು ಕಾರಣಾಂತರದಿಂದ ಹಿಂದಕ್ಕೆ ಪಡೆಯಲಾಗಿದೆ.
ಈ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ ಕೇಂದ್ರ ಸರ್ಕಾರ ದಿಂದ ಖೇಲೋ ಇಂಡಿಯಾ ಯೋಜನೆ ಯಡಿಯಲ್ಲಿ ಶಿವಮೊಗ್ಗ ನಗರದಲ್ಲಿರುವ ಬಹು ಒಳಾಂಗಣ ಕ್ರೀಡಾ ವಿಭಾಗಗಳನ್ನು ಉತ್ತೇಜಿಸಲು ಹಾಗೂ ಒಳಾಂಗಣ ಕ್ರೀಡಾ ಸಭಾಂಗಣವು ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಅದನ್ನು ಪುನರುಜ್ಜೀವನಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ಸಚಿವರು ಈ ಪ್ರಸ್ತಾವನೆಗಳಿಗೆ ಅವರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿ ಅನುಷ್ಠಾನ ಗೊಳಿಸುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸಂಪೂರ್ಣ ಬೆಂಬಲ ಮತ್ತು ಬದ್ಧತೆಯ ಭರವಸೆ ನೀಡಿ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.