ಮತ್ತೆ ಆರಂಭವಾಯ್ತು ಮಂಗನ ಕಾಯಿಲೆ

Kranti Deepa

ಶಿವಮೊಗ್ಗ,ಡಿ.18  : ತೀರ್ಥಹಳ್ಳಿ ತಾಲ್ಲೂಕುನಲ್ಲಿ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಕಾಣಿಸಿದೆ. ಇಲ್ಲಿನ ಬಸವಾನಿ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿದ ಉಣ್ಣೆಗಳ ಮಾದರಿ ಪರೀಕ್ಷೆಯಲ್ಲಿ ಉಣ್ಣೆಗಳಲ್ಲಿ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿದೆ. ಈ ಸಂಬಂಧ ಅಧಿಕಾರಿಗಳು ಇನ್ನಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಕೆಎಫ್‌ಡಿ ಬಾಧಿತ ಗ್ರಾಮಗಳ ಸುತ್ತಲಿನ ಪ್ರದೇಶಗಳಲ್ಲಿ ರೋಗ ನಿಯಂತ್ರಣದ ಉದ್ದೇಶದಿಂದ ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ರೋಗ ಲಕ್ಷಣ ಕಂಡು ಬಂದಿರುವ ಪ್ರದೇಶದಲ್ಲಿ 600 ಬಾಟಲಿ ಡಿಎಂಪಿ ತೈಲ ಸರಭರಾಜು ಮಾಡಲಾಗಿದೆ. ಮಾದರಿ ಪರೀಕ್ಷೆಯಲ್ಲಿ ಉಣ್ಣೆಯಲ್ಲಿ ಕೆಎಫ್‌ಡಿ ಕಂಡುಬಂದಿದೆ, ಈ ನಿಟ್ಟಿನಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಕೆ.ಟಿ. ಅನಿಕೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬದಲಾದ ವಾತಾವರಣದಲ್ಲಿ ಕೆಎಫ್‌ಡಿ ಹರಡುವ ಸಂಭವನೀಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಉಣ್ಣೆಗಳ ಮಾದರಿ ಪರೀಕ್ಷೆ ನಡೆಸಿತ್ತು. ಹೀಗೆ ಸಂಗ್ರಹಿಸಿದ ಟಿಕ್ ಅಥವಾ ಉಣ್ಣೇಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗಾಗಿ ಕಳಹಿಸಲಾಗಿತ್ತು. ಅಲ್ಲಿಂದ ಬಂದ ವರದಿಯ ಬಳಿಕ ಇದೀಗ ಆರೋಗ್ಯ ಇಲಾಖೆ ಇನ್ನಷ್ಟು ಅಲರ್ಟ್ ಆಗಿದೆ.

Share This Article
";