ಶಿವಮೊಗ್ಗ,ನ. 28 : ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೋಹನ್ ಕುಮಾರ್, ಖಜಾಂಚಿ ಯಾಗಿ ಶಿವಮೊಗ್ಗ ಉಪವಿಭಾಗಾಕಾರಿ ಸತ್ಯನಾರಾಯಣ್, ರಾಜ್ಯ ಪರಿಷತ್ ಸದಸ್ಯರಾಗಿ ಸಿಡಿಪಿಓ ರಂಗನಾಥ್ ಅವರನ್ನು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಪಾಪಣ್ಣ, ಕಾರ್ಯಾ ಧ್ಯಕ್ಷರಾಗಿ ಡಾ|| ಹಿರೇಮಠ್ ಗೌರವಾಧ್ಯಕ್ಷ ರಾಗಿ ನರಸಿಂಹಮೂರ್ತಿ, ಹಿರಿಯ ಉಪಾಧ್ಯಕ್ಷರಾಗಿ ದಿನೇಶ್, ರವಿ, ಸುಮತಿ ಇವರುಗಳು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಈಚೆಗಷ್ಟೇ ಚುನಾವಣೆ ನಡೆದಿತ್ತು. ಒಟ್ಟು 66 ಮಂದಿ ನಿರ್ದೇಶಕರ ಪೈಕಿ 38 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 28 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಹಿರಿಯ ನೌಕರರ ಮೋಹನ್‌ಕುಮಾರ್, ಸತ್ಯನಾರಾಯಣ, ಸಿಡಿಪಿಓ ರಂಗನಾಥ್ ಅವರು ಸೇರಿ ಉಳಿದವರು ಆಯ್ಕೆಯಾಗಿದ್ದರು.
ಚುನಾವಣೆ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಡಿಸೆಂಬರ್ ೪ಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ ನ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಈ ಸಂದರ್ಭದಲ್ಲಿ ಮೇಲಿನ ಮೂವರೇ ತಮ್ಮ ತಮ್ಮ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಇವರುಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಮಾರ್ಗ ದರ್ಶನದಲ್ಲಿ ಜಿಲ್ಲೆಯ ನೌಕರರಲ್ಲಿ ಯಾವುದೇ ಭಿನ್ನ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನೌಕರರ ಹಿತಕ್ಕಾಗಿ ಶ್ರಮಿ ಸಲು ಇಚ್ಚಿಸುವ ಆಸಕ್ತರನ್ನು ಗುರುತಿಸಿ, ಈ ಹಿಂದೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ವಿವಿಧ ಇಲಾಖೆಗಳ 38 ಸದಸ್ಯರು ಅವಿರೋಧ ವಾಗಿ ಹಾಗೂ 28 ಸದಸ್ಯರು ಚುನಾವಣೆ ಮೂಲಕ ಆಯ್ಕೆಗೊಂಡಿದ್ದರು. ಈ ಎರಡೂ ಹಂತದಲ್ಲಿಯೂ ಸಿ.ಎಸ್. ಷಡಾಕ್ಷರಿ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಸಿದ್ದರು. ಇದೀಗ ಜಿಲ್ಲೆಯ ಪದಾಧಿಕಾರಿಗಳಿಗೆ ಅವಿರೋಧ ಆಯ್ಕೆ ಯಾಗುವ ಮೂಲಕ ಸಂಘದಲ್ಲಿ ಯಾವುದೇ ಬಣವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
-ಸಿಎಸ್ ಷಡಾಕ್ಷರಿ,
ರಾಜ್ಯಾಧ್ಯಕ್ಷರು
-ಆರ್.ಮೋಹನ್‌ಕುಮಾರ್,
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ