ಶರಾವತಿ ಬೆಂಗಳೂರಿಗೆ ಹರಿಯಳು : ಶಾಸಕ ಗೋಪಾಲಕೃಷ್ಣ ಬೇಳೂರು

Kranti Deepa

ಶಿವಮೊಗ್ಗ,ಅ.21 : ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯ ಪ್ರಸ್ತಾಪ ಸದ್ಯಕ್ಕಿಲ್ಲ, ಸರ್ಕಾರವಾಗಲಿ, ತಾವಾಗಲಿ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತ ನಾಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯ ಪ್ರಸ್ತಾಪ ಮಲೆನಾಡಿನಲ್ಲಿ ಸಾಕಷ್ಟು ಸುದ್ದಿ ಆಗಿದೆ. ಅನೇಕ ಮಂದಿ ಪರಿಸರ ವಾದಿಗಳು, ಹೋರಾಟಗಾರರು ವಿರೋಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈ ಬಗ್ಗೆ ಯಾವುದೇ ಆತಂಕಬೇಡ ಎಂದು ತಿಳಿಸಿದರು.

ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ನಮ್ಮ ಸರ್ಕಾರದ್ದಲ್ಲ. ಈ ಹಿಂದೆ ಬೊಮ್ಮಾಯಿ ಸರ್ಕಾರ ಇದ್ದಾಗ ಈ ಯೋಜನೆಯ ಪ್ರಸ್ತಾಪ ಮಾಡಲಾ ಗಿತ್ತು. ನಮ್ಮ ಸರ್ಕಾರ ಬಂದಾಗ ಈ ಯೋಜ ನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ವರದಿ ಕೇಳಿತ್ತು. ಆಗ ಇದು ೨೦ ಸಾವಿರ ಕೋಟಿ ರೂ. ಯೋಜನೆ ಎಂಬುದು ಬೆಳಕಿಗೆ ಬಂತು. ಹಾಗೆಯೇ ನಾನು ಕೂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಇದು ಅಸಾಧ್ಯದ ಯೋಜನೆ. ಇದು ಕಾರ್ಯ ಸಾಧುವಲ್ಲ, ಇದನ್ನು ಜಾರಿಗೆ ತರಬಾರದು ಎಂದು ಮನವಿ ಮಾಡಿದ್ದೇನೆ. ಈ ಕಾರಣದಿಂದಲೇ ಸರ್ಕಾರ ಈ ಯೋಜನೆಯನ್ನು ಸದ್ಯಕ್ಕೆ ಕೈ ಬಿಟ್ಟಿದೆ ಎಂದರು.

ಈಗ ಈ ಯೋಜನೆಯ ವಿಚಾರದಲ್ಲಿ ಯಾವುದೇ ಹೋರಾಟಗಳು ಸಜ್ಜುಗೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆ ಈ ಯೋಜನೆಯ ಪ್ರಸ್ತಾಪ ಇಲ್ಲ ಎಂದು ಮನವಿ ಮಾಡಿದರು.
ಬಿಜೆಪಿಯಲ್ಲಿಯೇ ಕೆಲವು ಶತ್ರುಗಳಿದ್ದಾರೆ ನ್ನುವ  ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕುಮಾರ ಸ್ವಾಮಿ ಅವರಿಗೆ ಈಗ ಬಿಜೆಪಿಯಲ್ಲಿರುವ ಶತ್ರುಗಳಿರು ವುದು ಗೊತ್ತಾಗಿದೆ. ಇವರ ಮೈತ್ರಿ ಹೆಚ್ಚು ದಿನ ಉಳಿಯೋದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾ ಗಿದೆ.

ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕೆಳಗಿಳಿಸಲು ಯತ್ನಾಳ್ ಮತ್ತು ಈಶ್ವರಪ್ಪ ನವರ ತಂಡ ಹೊರಟಿದೆ. ಇದೆಲ್ಲ ಬಿಟ್ಟು ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಅಕಾರದಿಂದ ಕೆಳಗಿಳಿಸುವ ಮಾತನಾ ಡುತ್ತಾರೆ. ಇದು ಹಾಸ್ಯಾಸ್ಪದವಾಗಿದೆ ಎಂದರು.

ಮೂರು ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಶಂಕರಘಟ್ಟ ರಮೇಶ್, ಶಿ.ಜು. ಪಾಶಾ, ಜಿ. ಪದ್ಮನಾಭ್, ಸೋಮಶೇಖರ್, ಬಾಲಾಜಿ ಇದ್ದರು.

Share This Article
";