ಮೇ 03: ವಿದ್ಯುತ್ ವ್ಯತ್ಯಯ

Kranti Deepa

ಶಿವಮೊಗ್ಗ, ಮೇ .02  : ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ  ಮೇ 03 ರಂದು ಬೆಳಗ್ಗೆ 09-00 ರಿಂದ ಸಂಜೆ 05.00 ರ  ವರೆಗೆ ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ  ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, ಭೋವಿ ಕಾಲೋನಿ, ಆದರ್ಶನಗರ, ಸಹಕಾರಿನಗರ, ಹೊಂಗಿರಣ ಬಡಾವಣೆ, ರವಿಶಂಕರ್ ಗುರುಜಿ ಶಾಳೆಯ ಸುತ್ತಮುತ್ತ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್, ದೇವಕಾತಿಕೊಪ್ಪ, ಪಶುವೈದ್ಯಕೀಯ ಕಾಲೇಜು, ಗೆಜ್ಜೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Share This Article
";